’ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ’ಯಿಂದ ಡಾ. ಎಂ.ಎನ್. ರಾಜೇಂದ್ರ ಕುಮಾರ್‌ಗೆ ’ಸಹಕಾರಿ ಸಾರ್ವಭೌಮ’ ಪ್ರಶಸ್ತಿ ಪ್ರದಾನ
ಬಹರೈನ್"ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ವತಿಯಿಂದ ನವೆಂಬರ್-28 ರಂದು ಬಹರೈನ್ ಇಂಡಿಯನ್ ಕ್ಲಬ್ ಸಭಾಭವನದಲ್ಲಿ ’ಕರ್ನಾಟಕ ರಾಜ್ಯೋತ್ಸವ ’ ಹಾಗೂ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಅದ್ದೂರಿಯ ಸಮಾರಂಭದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಸ್ಥಾಪಿಸಿದ ಮೊದಲ ’ಸಹಕಾರಿ ಸಾರ್ವಭೌಮ’ ಪ್ರಶಸ್ತಿಯನ್ನು ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಶುಕ್ರವಾರ ಭಾರತೀಯ ರಾಯಭಾರಿ ಎಚ್.ಇ. ವಿನೋದ್ ಕೆ. ಜೇಕಬ್ ಅವರು ಪ್ರದಾನ ಮಾಡಿದರು. ಡಾ. ಎಂಎನ್‌ಆರ್ ಸಹಕಾರ ಕ್ಷೇತ್ರದಲ್ಲಿ ಹಾಗೂ ಸಾಮಾಜಿಕ ರಂಗದಲ್ಲಿ ಗೈದ ಗಣನೀಯ ಸಾಧನೆಯನ್ನು ಬಹರೈನ್ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಬಹರೈನ್"ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಸಹಕಾರಿ ಸಾರ್ವಭೌಮ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ , ಬಹರೈನ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಉಪಾಧ್ಯಕ್ಷ ಮೊಹಮ್ಮದ್ ಅಬ್ದುಲ್ ಜಬ್ಬಾರ್ ಅಲ್- ಕೂಹೆಜಿ , ಪ್ರವಾಸಿ ಭಾರತೀಯ ಪ್ರಶಸ್ತಿ ಪುರಸ್ಕೃತ ಜಿ. ಬಾಬು ರಾಜನ್, ದಿ ಇಂಡಿಯಾನ್ ಕ್ಲಬ್ ಅಧ್ಯಕ್ಷ ಜೋಸೆಫ್ ಜ್ವಾಯಿ, ಬಹರೈನ್ ಕ್ರಿಕೆಟ್ ಫೆಡರೇಶನ್ ಸಲಹಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಮನ್ಸೂರ್ ಕನ್ನಂಗಾರ್, ಮುಖ್ಯಅತಿಥಿಗಳಾಗಿದ್ದರು.
ಬಹರೈನ್"ಕರ್ನಾಟಕ ಅನಿವಾಸಿ ಭಾರತೀಯ ಸಂಘಟನೆಯ ಅಧ್ಯಕ್ಷರಾದ ರಾಜ್ ಕುಮಾರ್ ಭಾಸ್ಕರ್ , ಉಪಾಧ್ಯಕ್ಷರಾದ ವಿಜಯಕುಮಾರ ನಾಯ್ಕ , ಪ್ರಧಾನ ಕಾರ್ಯದರ್ಶಿ ರೋಶನ್ ಲೂಯಿಸ್ , ಸಹಾಯಕ ಪ್ರಧಾನ ಕಾರ್ಯದರ್ಶಿ ವಿತಿಯಾ ಜುಮಾಲುದ್ದೀನ್, ಕೋಶಾಧಿಕಾರಿ ಮಂಗೇಶ ದೇಸಾಯಿ, ಸಮಿತಿ ಸದಸ್ಯರುಗಳಾದ ಗಣೇಶ ಮಾಣಿಲ, ರಾಘವೇಂದ್ರ ಪ್ರಸಾದ್, ಮಲ್ಲಿಕಾರ್ಜುನ ಪಾಟೀಲ , ಹಿರಿಯ ಸಲಹೆಗಾರ ಅಸ್ಟೀನ್ ಸಂತೋಷ್ ಉಪಸ್ಥಿತರಿದ್ದರು.