ನ.5 ರಂದು ಬಿಲ್ವಾರ್ಚನೆ-ಕುಂಕುಮಾರ್ಚನೆ
Sunday, November 2, 2025
ಕುಂದಾಪುರ: ಕೋಟೇಶ್ವರದ ಶ್ರೀ ಶಂಕರ ಜಯಂತಿ ಉತ್ಸವ ಸಮಿತಿಯ ಆಶ್ರಯದಲ್ಲಿ ನ.5ನೇ ಬುಧವಾರ ಇಲ್ಲಿನ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಸಮಿತಿಯ ಸದಸ್ಯರಿಂದ ಶಿವ ಸಹಸ್ರನಾಮಾವಳಿ ಪೂರ್ವಕ ಬಿಲ್ವಾರ್ಚನೆ ಮತ್ತು ಮಹಿಳಾ ಸದಸ್ಯರಿಂದ ಲಲಿತಾಸಹಸ್ರನಾಮಾವಳಿ ಪೂರ್ವಕ ಕುಂಕುಮಾರ್ಚನೆ ಹಮ್ಮಿಕೊಳ್ಳಲಾಗಿದೆ.
ಇದೇ ಸಂದರ್ಭದಲ್ಲಿ ಶ್ರೀ ಮೂಲೆ ಗಣಪತಿಗೆ ಕಡಬು ನೈವೇದ್ಯ ಸೇವೆಯನ್ನೂ ನಡೆಸಲಾಗುವುದು.
ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕಾರ್ಯಕ್ರಮಗಳು ಆರಂಭಗೊಳ್ಳುವುವು. ಅರ್ಚನೆಯಲ್ಲಿ ಭಾಗವಹಿಸುವವರು ಹೂವು, ಕುಂಕುಮ, ಬಿಲ್ವಪತ್ರೆ ಮತ್ತು ಇತರ ಪರಿಕರಗಳನ್ನು ತಂದು ಸಹಕರಿಸಬೇಕಾಗಿ ಕೋರಲಾಗಿದೆ. ಮಾಹಿತಿ ಅಪೇಕ್ಷಿತರು 9449081558, 9844995336 ದೂರವಾಣಿ ಸಂಪರ್ಕಿಸುವಂತೆ ಸಮಿತಿಯವರು ಮನವಿ ಮಾಡಿದ್ದಾರೆ.