ಸಮುದಾಯ ಆರೋಗ್ಯ ಕೇಂದ್ರ ಮೇಲ್ದಜೆ೯ಗೆ, ಶಾಶ್ವತ ರಕ್ತ ಬ್ಯಾಂಕ್ ಗಾಗಿ ಸಚಿವರಿಗೆ ಮನವಿ

ಸಮುದಾಯ ಆರೋಗ್ಯ ಕೇಂದ್ರ ಮೇಲ್ದಜೆ೯ಗೆ, ಶಾಶ್ವತ ರಕ್ತ ಬ್ಯಾಂಕ್ ಗಾಗಿ ಸಚಿವರಿಗೆ ಮನವಿ


ಮೂಡುಬಿದಿರೆ: ಈ ಪ್ರದೇಶದ ಆರೋಗ್ಯ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯ ದೃಷ್ಟಿಯಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದಜೆ೯ಗೇರಿಸಬೇಕು, ಸರಕಾರಿ ಅಧೀನದಲ್ಲಿನ ಶಾಶ್ವತ ರಕ್ತ ಬ್ಯಾಂಕ್ ಅಥವಾ ರಕ್ತ ಶೇಖರಣಾ ಘಟಕ ಸ್ಥಾಪನೆ ಹಾಗೂ ಮೂಡುಬಿದಿರೆಯಲ್ಲಿ ಚೌಟ ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರವನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಜವನೆರ್ ಬೆದ್ರ ಪೌಂಡೇಷನ್ (ರಿ) ವತಿಯಿಂದ ಅಮರ್ ಕೋಟೆ ಅವರು  ಶನಿವಾರ ಮನವಿಯನ್ನು ಸಲ್ಲಿಸಿದರು.

ಬೆಳೆಯುತ್ತಿರುವ ಮೂಡುಬಿದಿರೆ ನಗರದಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನಸಂಖ್ಯೆಯೂ ಹೆಚ್ಚುತ್ತಿದೆ. ಈಗ ಇರುವ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದಜೆ೯ಗೇರಿಸಿದರೆ ಸ್ಥಳೀಯ ನಾಗರಿಕರಿಗೆ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳು ದೊರೆಯಲಿದ್ದು ತುತು೯ ವೈದ್ಯಕೀಯ ಸೇವೆಗಳಿಗೂ ಬಲ ನೀಡಿದಂತ್ತಾಗುತ್ತದೆ. 

ಮೂಡುಬಿದಿರೆಯಲ್ಲಿ ಪ್ರಸ್ತುತ ಖಾಸಗಿ ರಕ್ತ ಬ್ಯಾಂಕ್ ಗಳಿದ್ದು ಅವುಗಳಲ್ಲಿ ರಕ್ತ ಪೂರೈಕೆಗೆ ಹೆಚ್ಚಿನ ಮೊತ್ತವನ್ನು ವಿಧಿಸಲಾಗುತ್ತದೆ ಇದರಿಂದ ಆಥಿ೯ಕವಾಗಿ ಹಿಂದುಳಿದವರು, ದುಬ೯ಲ ಕುಟುಂಬದವರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ರಕ್ತ ಬ್ಯಾಂಕ್ ನ್ನು ಸ್ಥಾಪಿಸಿದರೆ ತುತು೯ ಆರೋಗ್ಯ ಸೇವೆಗಳಲ್ಲಿ ಜೀವ ರಕ್ಷಣೆಗೆ ಮಹತ್ವದ ಸಹಾಯ ಮಾಡಿದಂತ್ತಾಗುತ್ತದೆ.

ಮೂಡುಬಿದಿರೆಯು ಐತಿಹಾಸಿಕ ಮತ್ತು ಧಾಮಿ೯ಕ ಪರಂಪರೆಯೊಂದಿಗೆ 'ಜೈನ ಕಾಶಿ' ಎಂದು ಪ್ರಸಿದ್ಧವಾಗಿದೆ. ಇಲ್ಲಿ ಅನೇಕ ಪ್ರಾಚೀನ ಬಸದಿಗಳು, ದೇವಾಲಯಗಳು ಮತ್ತು ಸಾಂಸ್ಕೃತಿಕ ಧಾಮಿ೯ಕ ಸ್ಮಾರಕಗಳಿವೆ. ತುಳುನಾಡಿನ ವೀರ ರಾಣಿಯಾದ ರಾಣಿ ಅಬ್ಬಕ್ಕ ಅವರ ಶೌಯ೯, ದೇಶಭಕ್ತಿ ಮತ್ತು ಸ್ತ್ರಿಶಕ್ತಿ ಕುರಿತು ಸಂಶೋಧನೆ ಹಾಗೂ ಅಧ್ಯಯನ ನಡೆಸಲು ಅವರ ಹೆಸರಿನಲ್ಲಿ ಸಂಶೋಧನಾ ಕೇಂದ್ರದ ಅಗತ್ತವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ. 

ಈ ಸಂದಭ೯ದಲ್ಲಿ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಮಾಜಿ ಸಚಿವ ಕೆ. ಅಭಯಚಂದ್ರ, ಪುರಸಭಾಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಚೌಟರ ಅರಮನೆಯ ಕುಲದೀಪ ಎಂ. ಕೆಪಿಸಿಸಿ ಕಾಯ೯ದಶಿ೯ ಮಿಥುನ್ ರೈ, ಪುರಸಭಾ ಸದಸ್ಯರಾದ ಜೊಸ್ಸಿ ಮಿನೇಜಸ್, ಪುರಂದರ ದೇವಾಡಿಗ, ಸುರೇಶ್ ಕೋಟ್ಯಾನ್, ಮುಖ್ಯಾಧಿಕಾರಿ ಇಂದು ಎಂ.,ಸುದಶ೯ನ್ ಎಂ ಮತ್ತಿತರರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article