ಬಲಿಪ ಭಾಗವತದ್ವಯರ ಪುಣ್ಯ ಸ್ಮೃತಿ: ಪೆರುವಾಯಿ ನಾರಾಯಣ ಭಟ್ ಅವರಿಗೆ ಬಲಿಪ ಪ್ರಶಸ್ತಿ ಪ್ರದಾನ

ಬಲಿಪ ಭಾಗವತದ್ವಯರ ಪುಣ್ಯ ಸ್ಮೃತಿ: ಪೆರುವಾಯಿ ನಾರಾಯಣ ಭಟ್ ಅವರಿಗೆ ಬಲಿಪ ಪ್ರಶಸ್ತಿ ಪ್ರದಾನ


ಮೂಡುಬಿದಿರೆ: ಯಕ್ಷಗಾನದ ಮುಖಾಂತರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಜಾಗೃತಿ ಮೂಡುತ್ತದೆ. ತಮ್ಮದೇ ಅಪೂರ್ವ ಶೈಲಿಯ ಮೂಲಕ ಬಲಿಪ ಭಾಗವತಧ್ವಯಯರು ಯಕ್ಷಗಾನರಂಗವನ್ನು ಆಳಿದ್ದಾರೆ. ಯಕ್ಷಗಾನ ಕಲಾವಿದರಿಗೆ ಬದುಕಿಗೆ ಶಕ್ತಿ ತುಂಬುವಂತಹ ಕೆಲಸ ಸರ್ಕಾರ, ಸಮಾಜ ಮಾಡಬೇಕು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಹೇಳಿದರು.

ಅವರು ಎಕ್ಸಲೆಂಟ್ ವಿದ್ಯಾಸಂಸ್ಥೆ ಸಹಯೋಗದೊಂದಿಗೆ ಕಲ್ಲಬೆಟ್ಟು ಎಕ್ಸಲೆಂಟ್ ವಿದ್ಯಾಸಂಸ್ಥೆಯಲಿ ಭಾನುವಾರ ನಡೆದ ಕೀರ್ತಿಶೇಷ ಬಲಿಪ ಭಾಗವತದೈಯರ ಪುಣ್ಯ ಸ್ಮೃತಿಯ ಕಾಯ೯ಕ್ರಮದಲ್ಲಿ

ಹಿಮ್ಮೇಳ ವಾದಕ ಪೆರುವಾಯಿ ನಾರಾಯಣ ಭಟ್ ಅವರಿಗೆ ಬಲಿಪ ಪ್ರಶಸ್ತಿ ಪ್ರದಾನ ಕಾಯ೯ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ಬಲಿಪ ಭಾಗವತರು ಹಾಗೂ ಅವರ ಕುಟುಂಬಿಕರ ಸರಳ, ಸಜ್ಜನಿಕೆ ಪ್ರತಿಯೊಬ್ಬರಿಗೂ ಮಾದರಿ. ಇಂದಿಗೂ ಅವಿಭಕ್ತ ಕುಟುಂಬದಲ್ಲಿ ಪರಸ್ಪರ ಪ್ರೀತಿ, ಸಾಮರಸ್ಯದಿಂದ ಬಹುದುಕುತ್ತಿರುವುದು ಶ್ಲಾಘನೀಯ. ಹಿಂದೆ ಕಾಲೇಜು ಸ್ಥಾಪನೆಯ ಸಂದರ್ಭ ಪರಿಚಿತರೊಬ್ಬರು ಬಲಿಪ ಭಾಗವತರ ಮನೆಯ ಪರಿಸರವನ್ನು ತೋರಿಸಿದ್ದರು. ನಾನು ಬಲಿಪ ಮನೆ, ಪರಿಸರ ಕಲೆ ನೆಲೆಸಿರುವ ಪರಿಸರ ಅದನ್ನು ಎಂದಿಗೂ ಮಾರಾಟಕ್ಕೆ ಉಪಯೋಗಿಸಬೇಡಿ ಎಂದು ಹೇಳಿದ್ದೆ. ಬಲಿಪರ ಮನೆಯ ಮಕ್ಕಳ ಶಿಕ್ಷಣಕ್ಕೆ ಎಕ್ಸಲೆಂಟ್ ಸಂಸ್ಥೆಯಲ್ಲಿ ಪ್ರೋತ್ಸಾಹ ನೀಡಲಾಗುವುದು ಎಂದರು. 

ಡಾ.ವಾದಿರಾಜ ಕಲ್ಲೂರಾಯ ಸಂಸ್ಮರಣಾ ನುಡಿಗಳನ್ನಾಡಿ, ಯಕ್ಷಗಾನವೇ ಬಲಿಪರಿಗೆ ಆತ್ಮವಾಗಿತ್ತು. ಅವರು ಕಲೆಯನ್ನು ಪ್ರೀತಿಸುವ, ಆರಾಧನೆ ಮಾಡುವಂತವಾಗಿ ಪ್ರಾತಃಸ್ಮರಣೀಯರು. ಬಲಿಪ ಭಾಗವತರ ಗುಣಗಳನ್ನು ಪ್ರತಿಬಿಂಬಿಸುವಂತಹ ವ್ಯಕ್ತಿತ್ವ, ಶೈಲಿ ಪ್ರಸಾದ ಬಲಿಪರದ್ದು. ಅವರು ಮಗು ಮನಸ್ಸಿನ ಕಲಾವಿದ. ಬಲಿಪ ಧ್ವಯರ ಒಡನಾಡಿಯಾಗಿ, ಯಕ್ಷಗಾನದ ಹಿಮ್ಮೇಳದಲ್ಲಿ ತಮ್ಮದೇ ಛಾಪು ಮೂಡಿಸಿ, ಯುವ ಹಿಮ್ಮೇಳ ಕಲಾವಿದರನ್ನು ರೂಪಿಸುತ್ತಿರುವ ಪೆರುವಾಜೆ ಭಟ್ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಅರ್ಥಪೂರ್ಣ ಎಂದರು.

ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಯುವರಾಜ್-ಜೈನ್ ರಶ್ಮಿತಾ ದಂಪತಿಯನ್ನು ಬಲಿಪರ ಕುಟುಂಬಸ್ಥರು ಗೌರವಿಸಿದರು.

ಉದ್ಯಮಿ ಕೆ.ಶ್ರೀಪತಿ ಭಟ್, ಮಂಗಳೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ, ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಜೈನ್, ಯಕ್ಷಗಾನ ಸಂಘಟಕ ಭುಜಬಲಿ ಧರ್ಮಸ್ಥಳ, ಬಲಿಪ ಮಾಧವ ಭಟ್, ಬಲಿಪ ನಾರಾಯಣ ಭಾಗವತರ ಪುತ್ರ ಶಿವಶಂಕರ ಬಲಿಪ,

ವಿಕ್ರಂ ನಾಯಕ್ ಸನ್ಮಾನಪತ್ರ ವಾಚಿಸಿದರು. ಡಾ.ವಾದಿರಾಜ ಕಲ್ಲೂರಾಯ ನಿರೂಪಿಸಿದರು. 

ಬಳಿಕ ಗುರುದಕ್ಷಿಣೆ ಯಕ್ಷಗಾನ ತಾಳಮದ್ದಳೆ ನಡೆಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article