ಸಸಿಹಿತ್ಲು ಬೀಚ್ ಸಮುದ್ರದಲ್ಲಿ ಮುಳುಗಿದ ವಿದ್ಯಾರ್ಥಿಗಳು: ಐವರ ರಕ್ಷಣೆ, ಓರ್ವ ನೀರುಪಾಲು
Sunday, November 2, 2025
ಮಂಗಳೂರು: ನಗರದ ಹೊರವಲಯದ ಸಸಿಹಿತ್ಲು ಬೀಚ್‌ನಲ್ಲಿ ಭಾನುವಾರ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಸಮುದ್ರಕ್ಕಿಳಿದಿದ್ದ ವಿದ್ಯಾರ್ಥಿಗಳು ಮುಳುಗಿದ್ದು, ಐವರನ್ನು ರಕ್ಷಿಸಲಾಗಿದ್ದು, ಓರ್ವ ನೀರುಪಾಲಾಗಿದ್ದಾರೆ.
ಪ್ರಣಾಮ್ ಚಂದ್ರ (20) ನಾಪತ್ತೆಯಾದ ವಿದ್ಯಾರ್ಥಿ.
ಬೆಂಗಳೂರು ಕಾಲೇಜೊಂದರ 6 ವಿದ್ಯಾರ್ಥಿಗಳು ಭಾನುವಾರ ಬೆಳಗ್ಗೆ ಸಸಿಹಿತ್ಲು ಬೀಚ್‌ಗೆ ಬಂದಿದ್ದಾರೆ. ಅವರು ಸಮುದ್ರಕ್ಕಿಳಿದಿದ್ದು, ಅಲ್ಲಿ ಕರ್ತವ್ಯದಲ್ಲಿದ್ದ ಗೃಹರಕ್ಷಕದಳದ ಸಿಬ್ಬಂದಿ ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡಿದ್ದರು. ಅಪಾಯದ ಸೂಚನೆಯನ್ನು ನಿರ್ಲಕ್ಷಿಸಿ ವಿದ್ಯಾರ್ಥಿಗಳು ನೀರಿಗೆ ಇಳಿದಿದ್ದರು. ಈ ಸಂದರ್ಭ ಬೃಹತ್ ಅಲೆಯೊಂದು ಬಂದು ನೀರಿಗಿಳಿದಿದ್ದ ಆರು ಮಂದಿಯನ್ನು ಕೊಚ್ಚಿಕೊಂಡು ಹೋಗಿದೆ. ತಕ್ಷಣ ಅಲ್ಲಿದ್ದ ರಕ್ಷಣಾ ಸಿಬ್ಬಂದಿ ಕಾರ್ಯಾಚರಿಸಿ ಐವರು ವಿದ್ಯಾರ್ಥಿಗಳನ್ನು ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಓರ್ವ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.