ರಾಷ್ಟ್ರಗೀತೆಯ ವಂದೇ ಮಾತರಂನ 150ನೇ ವರ್ಷಾಚರಣೆ: ಸಂಗೀತಗಾರರಿಂದ ವಿಶೇಷ ಕಾರ್ಯಕ್ರಮ
Friday, November 7, 2025
ಮಂಗಳೂರು: ರಾಷ್ಟ್ರಗೀತೆಯ ವಂದೇ ಮಾತರಂನ 150ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹೊಸದಿಲ್ಲಿಯ ಇಂದಿರಾ ಗಾಂಧಿ ಒಳಾಂಗಣದಲ್ಲಿ ಶುಕ್ರವಾರ ಮೈಸೂರಿನ ಮಂಜುನಾಥ್ ಸಂಯೋಜನೆಯಲ್ಲಿ ನಡೆದ ಗ್ರ್ಯಾಂಡ್ ನ್ಯಾಷನಲ್ ಮ್ಯೂಸಿಕ್ ಎನ್ಸೆಂಬಲ್‌ನ ಕಾರ್ಯಕ್ರಮದಲ್ಲಿ ಖ್ಯಾತ ಯುವ ಸೀತಾರ್ ವಾದಕ ಮಂಗಳೂರಿನ ಅಂಕುಶ್ ನಾಯಕ್ ಸೇರಿದಂತೆ ದೇಶದ ಖ್ಯಾತ ಸಂಗೀತಗಾರರ ತಂಡವು ವಿಶೇಷ ಕಾರ್ಯಕ್ರಮವನ್ನು ನೀಡಿತು.
ಈ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡನ್ನು ವಿಶೇಷ ರೀತಿಯಲ್ಲಿ ಪ್ರಸ್ತುತ ಪಡಿಸಲಾಯಿತು.
ಕಾರ್ಯಕ್ರಮ ವೀಕ್ಷಿಸಿದ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರೇಕ್ಷಕರು ಎದ್ದು ನಿಂತು ಚಪ್ಪಾಳೆ ತಟ್ಟಿದರು. ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಮತ್ತು ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಉಪಸ್ಥಿತರಿದ್ದರು.
150ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ದೇಶದ ನಾನಾ ಭಾಗದಿಂದ ಆಯ್ದ ಪ್ರತಿಭೆಗಳಿಗೆ ಕಾರ್ಯಕ್ರಮ ನೀಡಲು ಆಹ್ವಾನಿಸಲಾಗಿತ್ತು. ಇದರಲ್ಲಿ ರಾಜ್ಯದ ಯುವ ಪ್ರತಿಭೆಗಳಿಗೆ ಅವಕಾಶ ದೊರೆತಿರುವುದು ರಾಜ್ಯದ ಹೆಮ್ಮೆ ಹಾಗೂ ಗೌರವವೂ ಹೌದು.