ರಸ್ತೆ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ನಾಗರಿಕರ ಪ್ರತಿಭಟನೆ
Tuesday, November 18, 2025
ಮಂಗಳೂರು: ಕಾನ ಪ್ರದೇಶದ ಚತುಷ್ಪಥ ರಸ್ತೆಯನ್ನು ಪೂರ್ಣಗೊಳಿಸಲು ಒತ್ತಾಯಿಸಿ, ರಸ್ತೆಯನ್ನು ಪೂರ್ಣಗೊಳಿಸದೆ ನಿತ್ಯ ಅಪಘಾತಕ್ಕೆ ಕಾರಣರಾಗುತ್ತಿರುವ ಪಿಡಬ್ಲೂಡಿ ಮತ್ತು ನಗರಪಾಲಿಕೆಯ ನಿರ್ಲಕ್ಷ್ಯತನವನ್ನು ಖಂಡಿಸಿ, ಕಾನ-ಜೋಕಟ್ಟೆ ಎಂಎಸ್‌ಇಝೆಡ್ ರಸ್ತೆ ದುರಸ್ಥಿಗೆ ಒತ್ತಾಯಿಸಿ ನಾಗರಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು ಕಾನ ಜಂಕ್ಷನ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಯಿತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಹಾಗೂ ನಾಗರಿಕ ಹೋರಾಟ ಸಮಿತಿ ಸಂಚಾಲಕ ಬಿ.ಕೆ. ಇಮ್ತಿಯಾಜ್ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಅಪವಿತ್ರ ಗುತ್ತಿಗೆ ಸಂಭಂದದಿಂದ ಸುರತ್ಕಲ್ ಎಂಆರ್‌ಪಿಎಲ್ ರಸ್ತೆಯ ಕಳಪೆ ಮತ್ತು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ ಹಲವೆಡೆ ಕಾಮಗಾರಿ ಅಪೂರ್ಣವಾಗಿದೆ. ಕಾನ-ಜೋಕಟ್ಟೆ ಎಂಎಸ್‌ಇಝೆಡ್ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ದಿನನಿತ್ಯ ಅಪಘಾತದಲ್ಲಿ ಸಾವು ನೋವು ಸಂಭವಿಸುತ್ತಿದ್ದರೂ, ಜನಪ್ರತಿನಿದಿನಗಳು ಮೌನವಾಗಿದ್ದಾರೆ ಎಂದು ಟೀಕಿಸಿದರು.
ಮಾಜಿ ಕಾಪೋರೇಟರ್ ಆಯಾಜ್ ಕೃಷ್ಣಾಪುರ, ಶ್ರೀನಾಥ್ ಕುಲಾಲ್ ಮಾತನಾಡಿದರು.
ಡಿವೈಎಫ್‌ಐ ಮುಖಂಡರಾದ ಬಿ.ಕೆ. ಮಕ್ಸೂದ್, ಅಜ್ಮಾಲ್ ಅಹ್ಮದ್, ನವಾಜ್ ಕುಳಾಯಿ, ಮುಸ್ತಫಾ ಬಾಳ, ಜೋಯ್ ರೋಷನ್ ಡಿ’ಸೋಜ, ಮುನೀಬ್, ಆಟೋ ರಿಕ್ಷಾ ಚಾಲಕರ ಸಂಘದ ಮುಖಂಡರಾದ ಲಕ್ಷ್ಮೀಶ ಅಂಚನ್, ಬಷೀರ್ ಕಾನ, ಹಂಝ ಮೈಂದಗುರಿ, ರಹೀಮ್, ನಾಗರಿಕ ಹೋರಾಟ ಸಮಿತಿಯ ಮೆಹಬೂಬ್ ಖಾನ್, ಜಗದೀಶ್ ಕಾನ, ರಾಜೇಶ್ ಕಾನ, ಅಬೂಬಕ್ಕರ್ ಅಂಗಡಿ, ಇಕ್ಬಾಲ್ ಜೋಕಟ್ಟೆ, ಸಿರಾಜ್ ಮೈಂದಗುರಿ, ಫ್ರಾನ್ಸಿಸ್ ಡಿಸೋಜಾ ಮತ್ತಿತರರು ಉಪಸ್ಥಿತರಿದ್ದರು.

