ಸಂತ ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಪ್ರೊ. ಪ್ರಶಾಂತ್ ಮಿನೇಜಸ್ ಕಾಲೇಜಿಗೆ ಭೇಟಿ: ಸಂವಾದ
ಪ್ರೊ. ಪ್ರಶಾಂತ್ ಅವರು ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೋಂತೆರೋ ಅವರನ್ನು ಅತ್ಯಾದರದಿಂದ ಸ್ವಾಗತಿಸಿದರು. ಅವರು ನೆರೆದಿದ್ದ ವಿಜ್ಞಾನ ವಿಭಾಗದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ತಾವು ಸಂಸ್ಥೆಯಲ್ಲಿ ಕಳೆದ ಅಮೂಲ್ಯ ಕ್ಷಣಗಳ ಬಗ್ಗೆ ಮೇಲಕ್ಕೂ ಹಾಕಿದರು. ಹಾಗೆಯೇ ಯಾವ ರೀತಿ ಈ ಸಂಸ್ಥೆ ತಮ್ಮಲ್ಲಿ ವೈಜ್ಞಾನಿಕ ಮನೋಭಾವ, ಈ ಕ್ಷೇತ್ರದಲ್ಲಿ ಆಸಕ್ತಿ ಬೆಳೆಯುವಂತೆ ಮೂಡಿತು ಎಂಬುವುದರ ಬಗ್ಗೆ ಮಾತನಾಡಿ, ‘ನನ್ನ ಸಾಧನೆಯ ಹಾದಿಗೆ ಭದ್ರ ಬುನಾದಿಯಾಗಿರುವ ಶಿಕ್ಷಣ ನೀಡಿದ ಕಾಲೇಜಿಗೆ ನಾನು ಸದಾ ಚಿರಋಣಿ. ನನ್ನ ಸಾಧನೆಯಲ್ಲಿ ಶಿಕ್ಷಕರಿಂದ ದೊರೆತ ಪ್ರೋತ್ಸಾಹ ಹಾಗೂ ಕಾಲೇಜಿನಲ್ಲಿ ದೊರೆತ ವೈಜ್ಞಾನಿಕ ಸಂಸ್ಕೃತಿಯ ವಾತಾವರಣವೇ ನನ್ನ ಇಂದಿನ ಈ ಯಶಸ್ಸಿಗೆ ಕಾರಣ’ ಎಂಬುದಾಗಿ ಹೇಳಿದರು.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಸಂವಾದ ನಡೆಸಿದ ಅವರು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆ ಹಾಗೂ ನಾವಿನ್ಯತೆಯ ಬಗ್ಗೆ ಇಂದು ಜಗತ್ತಿನಲ್ಲಿರುವ ಪ್ರಾಮುಖ್ಯತೆಯನ್ನು ತಿಳಿಸಿದರು. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಕಾಲೇಜು ಮಾಡಿದ ಸಾಧನೆಗಳನ್ನು ಪ್ರಶಂಸಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆಂಟನಿ ಪ್ರಕಾಶ್ ಮೋಂತೆರೋ ಪ್ರೊ. ಪ್ರಶಾಂತ್ ಮಿನೇಜಸ್ ಅವರನ್ನು ಶ್ಲಾಘಿಸಿ, ಅವರ ಸಾಧನೆಗೆ ಅಭಿನಂದಿಸಿದರು. ಹಾಗೆಯೇ ವಿದ್ಯಾರ್ಥಿಗಳಿಗೆ ಇವರ ಸಾಧನೆ ಸ್ಪೂರ್ತಿಯಾಗಬೇಕು. ಇಂದಿನ ವಿದ್ಯಾರ್ಥಿಗಳೂ ಕೂಡ ಈ ರೀತಿಯ ಸಾಧನೆಗಳನ್ನು ಮಾಡುವಂತಾಗಬೇಕು ಎಂದು ಹೇಳಿದರು.
