ಬೈಕಂಪಾಡಿಯಲ್ಲಿ ಮೃತಪಟ್ಟ ಮೂವರು ಮೋಂಟೆಪದವು ನಿವಾಸಿಗಳು
ಅಟೋ ಚಾಲಕ ಮರಿಕ್ಕಳ ನಿವಾಸಿ ಮನ್ಸೂರ್ (22) ಎಂದು ಗೊತ್ತಾಗಿದೆ.
ಮೊಂಟೆಪದವು ನಿವಾಸಿಗಳಾದ ಅಬೂಬಕ್ಕರ್ ಹಾಗೂ ಇಬ್ರಾಹಿಮ್ ಎಂಬಿಬ್ಬರು ಮೊಂಟೆಪದವುನಲ್ಲಿ ಪ್ರಕಾಶ್ ಬೀಡಿಯ ಪ್ರತ್ಯೇಕ ಬ್ರಾಂಚ್ ಹೊಂದಿದ್ದರು. ಇವರಿಬ್ಬರು ಕಾರ್ಮಿಕರಿಂದ ಸಂಗ್ರಹಿಸಿದ ಬೀಡಿಯನ್ನು ಬೈಕಂಪಾಡಿಯಲ್ಲಿರುವ ಪ್ರಕಾಶ್ ಬೀಡಿ ಕಂಪೆನಿಗೆ ನೀಡಲು ವಾರಕ್ಕೊಂದು ಬಾರಿ ರಿಕ್ಷಾದಲ್ಲಿ ಜೊತೆಯಾಗಿ ಹೋಗುತ್ತಿದ್ದರು.
ಇವರಿಬ್ಬರು ಎಂದಿನಂತೆ ಶನಿವಾರ ಮುಂಜಾನೆ ಮನ್ಸೂರ್ ಅವರ ರಿಕ್ಷಾದಲ್ಲಿ ಬೈಕಂಪಾಡಿಯ ಪ್ರಕಾಶ್ ಬೀಡಿ ಕಂಪೆನಿಗೆ ಬೀಡಿ ಕೊಡಲು ತೆರಳಿದ್ದರು. ಅವರು ಬ್ರಾಂಚ್ಗೆ ಹೋಗುತ್ತಿದ್ದ ಸಂದರ್ಭದಲ್ಲೇ ಬೈಕಂಪಾಡಿಯಲ್ಲಿ ಈ ದುರಂತ ಸಂಭವಿಸಿದೆ. ಈ ಘಟನೆಯಲ್ಲಿ ರಿಕ್ಷಾ ನಜ್ಜುಗುಜ್ಜಾಗಿದ್ದು, ಇದರಿಂದ ರಿಕ್ಷಾ ಚಾಲಕ ಮರಿಕ್ಕಳ ನಿವಾಸಿ ಮನ್ಸೂರ್ 22 ಹಾಗೂ ರಿಕ್ಷಾದಲ್ಲಿ ಬೀಡಿ ಸಾಗಿಸುತ್ತಿದ್ದ ಅಬೂಬಕರ್ ಹಾಗೂ ಇಬ್ರಾಹೀಮ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಅಬೂಬಕರ್ ಅವರು ಪತ್ನಿ ನಾಲ್ಕು ಹೆಣ್ಣು, ಎರಡು ಗಂಡು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತ ಇಬ್ರಾಹಿಮ್ ಅವರು ಪತ್ನಿ ಏಳು ಮಂದಿ ಪುತ್ರರು ಹಾಗೂ ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕುಟುಂಬದ ಆಧಾರ ಸ್ತಂಭಗಳಾಗಿದ್ದರು ಮೊಂಟೆಪಜವಿನಲ್ಲಿ ವಾಸವಿರುವ ಇವರಿಬ್ಬರು ಕುಟುಂಬದ ಆಧಾರ ಸ್ತಂಭಗಳಾಗಿದ್ದರು. ಕುಟುಂಬಗಳ ಜೀವನಕ್ಕೆ ಬೀಡಿ ಉದ್ಯಮವೇ ಮೂಲ ಆಧಾರ ಆಗಿತ್ತು. ಕಾರ್ಮಿಕರ ವಿಶ್ವಾಸ ಗಳಿಸಿ ಪ್ರಕಾಶ್ ಬೀಡಿ ಉದ್ಯಮ ಆರಂಭಿಸಿದ ಇವರಿಬ್ಬರೂ ಅದರಿಂದ ಬಂದ ಲಾಭದಿಂದ ಕುಟುಂಬದ ಖರ್ಚುವೆಚ್ಚ ಭರಿಸುತ್ತಿದ್ದರು. ಇದೀಗ ಬೈಕಂಪಾಡಿ ದುರಂತದಿಂದ ಇವರಿಬ್ಬರ ಅಗಲುವಿಕೆ ಈ ಕುಟುಂಬಗಳು ಆಧಾರ ಸ್ತಂಭ ಕಳೆದುಕೊಂಡಿವೆ.