ಹೊಟೇಲಿನಲ್ಲಿ ಅಕ್ರಮ ಮದ್ಯ ಪತ್ತೆ
Tuesday, December 23, 2025
ಬಂಟ್ವಾಳ: ಕಳ್ಳಿಗೆ ಗ್ರಾಮದ ನೆತ್ತರಕೆರೆ ಎಂಬಲ್ಲಿ ಹೊಟೇಲ್ ವೊಂದರಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಬಂಟ್ವಾಳ ನಗರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಇಲ್ಲಿನ ಹರೀಶ್ ಎಂಬವರಿಗೆ ಸೇರಿದ ಹೊಟೇಲ್‌ನಲ್ಲಿ ಅಕ್ರಮವಾಗಿ ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯನ್ವಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.
ಒಟ್ಟು 4 ಸಾ.ರೂ. ಮೌಲ್ಯದ 7.200 ಲೀಟರ್ ಮದ್ಯವನ್ನು ವಶಪಡಿಸಿದ್ದು, ಈ ಬಗ್ಗೆ ಬಂಟ್ವಾಳ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿರುತ್ತಾರೆ.