ಅಮನಬೆಟ್ಟುವಿನಲ್ಲಿ ಉಚಿತ ಆರೋಗ್ಯ ಮತ್ತು ನೇತ್ರಾ ಚಿಕಿತ್ಸಾ ಶಿಬಿರ
ಶ್ರೀ ಕ್ಷೇತ್ರ ಹೊಯಿಪಾಲ ಬೆಟ್ಟ ಮಾರ್ನಾಡು ಇಲ್ಲಿಯ ಧರ್ಮ ದರ್ಶಿಗಳಾದ ರಾಜೇಶ್ ಬಲ್ಲಾಳ್ ಅವರು ಶಿಬಿರವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆರೋಗ್ಯದ ಕಾಳಜಿಯಿಂದ ಮಾಡುತ್ತಿರುವ ಈ ಕಾರ್ಯಕ್ರಮ ಗ್ರಾಮೀಣ ಪ್ರದೇಶದ ಜನರಿಗೆ ಬಹಳ ಪ್ರಯೋಜನಕಾರಿಯಾಗಿದೆ ಎಂದರು. ಪ್ರಸ್ತುತ ದಿನದಲ್ಲಿ ನಾವು ತೆಗೆದುಕೊಳ್ಳುವ ಆಹಾರ ಹಾಗೂ ಆಹಾರ ಪದ್ದತಿಯಿಂದ ನಮ್ಮ ಆರೋಗ್ಯ ಇವತ್ತು ಕೆಟ್ಟಿದೆ ಎಂದರು.
ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಯೋಜನಾಧಿಕಾರಿ ಬಿ. ಧನಂಜಯ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಉದ್ದೇಶ, ಜ್ಞಾನ ವಿಕಾಸ ಕಾರ್ಯಕ್ರಮದಲ್ಲಿ ಮಹಿಳೆಯರ ಆರೋಗ್ಯದ ಬಗ್ಗೆ ಬಹಳಷ್ಟು ಕಾರ್ಯಕ್ರಮ ಆಯೋಜಿಸುತ್ತಿದ್ದು ಅದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಾಸು ದೇವ ಭಟ್, ಜನ ಜಾಗ್ರತಿ ಸದಸ್ಯರಾದ ಜಯ. ಬಿ ರವರು, ಯುವಕ ಮಂಡಲದ ಅಧ್ಯಕ್ಷರಾದ ಭರತ್. ಕೆ. ಶೆಟ್ಟಿ, ಪ್ರಜ್ಞಾ ಯುವತಿ ಮಂಡಲದ ಕಾರ್ಯ ದರ್ಶಿ ಶಶಿಕಲಾ, ಒಕ್ಕೂಟದ ಅಧ್ಯಕ್ಷ ಸುರೇಂದ್ರ ಪೂಜಾರಿ, ಮೌಂಟ್ ರೋಜರಿ ಆಸ್ಪತ್ರೆಯ ಡಾ.ಪುನೀತ್ ಪಕ್ಕಲ್, ಡಾ. ಶೋಭಿತ, ಸಂಪಕಾ೯ಧಿಕಾರಿ ಶುಭಾಕರ್, ಸೇವಾಪ್ರತಿನಿಧಿ ಉಷಾ ಕಿರಣ ಹಾಗೂ ಒಕ್ಕೂಟದ ಸದಸ್ಯರು, ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಯುವಕ ಮಂಡಲದ ಸರ್ವ ಸದಸ್ಯರು ಭಾಗವಹಿಸಿ ದ್ದರು.
ಸೇವಾಪ್ರತಿನಿಧಿ ಉಷಾ ಕಿರಣ್ ಸ್ವಾಗತಿಸಿದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ವಿದ್ಯಾ ಅವರು ಕಾರ್ಯಕ್ರಮ ನಿರೂಪಿಸಿದರು. ಮೇಲ್ವಿಚಾರಕ ಚಂದ್ರಹಾಸ ಅವರು ವಂದಿಸಿದರು.
ಸುಮಾರು 106 ಜನರು ಭಾಗವಹಿಸಿ ಬಿ.ಪಿ, ಶುಗರ್, ಕಣ್ಣಿನ ತಪಾಸಣೆ, ಜನರಲ್ ತಪಾಸಣೆ ನಡೆಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.