ಬ್ರಹ್ಮರಕೂಟ್ಟು ಟೋಲ್‌ಗೇಟ್ ಸಿಬ್ಬಂದಿಗಳಿಗೆ ಹಲ್ಲೆ-ಗೇಟ್‌ಗೆ ಹಾನಿ: ಇಬ್ಬರ ಬಂಧನ
Tuesday, December 30, 2025
ಬಂಟ್ವಾಳ: ಬ್ರಹ್ಮರಕೂಟ್ಟು ಟೋಲ್‌ಗೇಟ್ ಸಿಬ್ಬಂದಿಗಳಿಗೆ ಹಲ್ಲೆಗೈದು, ಗೇಟ್‌ಗೆ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕ ಹಾಗೂ ಕ್ಲೀನರ್‌ನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಮೂಲದ ಲಾರಿ ಚಾಲಕ ಭರತ್ (23) ಹಾಗೂ ಕ್ಲೀನರ್ ತೇಜಸ್ (26) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಟಾಟಾ ಲಾರಿಯಲ್ಲಿ ಟೋಲ್ ಬಳಿ ವಿರುದ್ಧ ದಿಕ್ಕಿನಲ್ಲಿ ಬಂದಿದ್ದು, ಟೋಲ್ ಸಿಬ್ಬಂದಿ ಶುಲ್ಕ ಕೇಳಿದಾಗ ಚಾಲಕ ಲಾರಿಯನ್ನು ಏಕಾಏಕಿ ಮುಂದಕ್ಕೆ ಚಲಾಯಿಸಿಕೊಂಡು ಹೋಗಿ ಟೋಲ್ ಗೇಟ್‌ಗೆ ಹಾನಿ ಮಾಡಿದ್ದಾನೆಂದು ಆರೋಪಿಸಲಾಗಿದೆ.
ಬಳಿಕ ಚಾಲಕ ಹಾಗೂ ಕ್ಲೀನರ್ ಟೋಲ್ ಸಿಬ್ಬಂದಿಗಳಾದ ಅಂಕಿತ್ ಮತ್ತು ರೋಹಿತ್‌ಗೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಘಟನೆಗೆ ಸಂಬಂಧ ಟೋಲ್ ಸಿಬ್ಬಂದಿ ಪ್ರಶಾಂತ್ ಬಿ. ಎಂಬವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿ ಕಾರ್ಯಾಚರಣೆಗಿಳಿದ ಬಂಟ್ವಾಳ ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.