ಮಂಗಳೂರು ಕಂಬಳದಲ್ಲಿ ಹಿರಿಯ ತೀರ್ಪುಗಾರಗೆ ಅವಮಾನ: ಜಾಲತಾಣದಲ್ಲಿ ವ್ಯಾಪಕ ಅಕ್ರೋಶ

ಮಂಗಳೂರು ಕಂಬಳದಲ್ಲಿ ಹಿರಿಯ ತೀರ್ಪುಗಾರಗೆ ಅವಮಾನ: ಜಾಲತಾಣದಲ್ಲಿ ವ್ಯಾಪಕ ಅಕ್ರೋಶ

ಮಂಗಳೂರು: ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಭಾನುವಾರ ಮುಕ್ತಾಯಗೊಂಡ ಕಂಬಳದಲ್ಲಿ ಕಂಬಳದ ಹಿರಿಯ ತೀರ್ಪುಗಾರರಿಗೆ ಕಂಬಳದ ವ್ಯಕ್ತಿ ಒಬ್ಬರು ಅವಮಾನ ಮಾಡಿದ್ದಾರೆ ಎಂಬ ವಿಚಾರ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ, ಕಂಬಳ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕಂಬಳ ಕ್ಷೇತ್ರದ ಭೀಷ್ಮರೆಂದೇ ಗುರುತಿಸಲ್ಪಡುವ, ಸುಮಾರು 45 ವರ್ಷಗಳಿಂದ ಕಂಬಳಕ್ಕೆ ಸೇವೆ ಸಲ್ಲಿಸಿರುವ ಅನುಭವಿ ವ್ಯಕ್ತಿ ಗುಣಪಾಲ್ ಕಡಂಬ ಅವರಿಗೆ ಮಂಗಳೂರು ಕಂಬಳದ ಸಂದರ್ಭದಲ್ಲಿ ಅರುಣ್ ಶೆಟ್ಟಿ ಎಂಬ ವ್ಯಕ್ತಿಯಿಂದ ಸಾರ್ವಜನಿಕವಾಗಿ ಅವಮಾನ ಮಾಡಲಾಗಿದೆ. ಈ ಘಟನೆ ಗುಣಪಾಲ್ ಕಡಂಬರವರ ಅಭಿಮಾನಿಗಳು ಹಾಗೂ ಕಂಬಳವನ್ನು ಪ್ರೀತಿಸುವ ಅನೇಕ ಮಂದಿಯ ಮನಸ್ಸಿಗೆ ತೀವ್ರವಾಗಿ ನೋವುಂಟುಮಾಡಿದೆ ಎಂದು ಜಾಲತಾಣದಲ್ಲಿ ಆಕ್ಷೇಪಿಸಲಾದ ಬರಹ ಒಂದು ಪೋಸ್ಟ್ ಕಂಡಿದೆ.

ಆದ್ದರಿಂದ ಮುಂದಿನ ಕಂಬಳ ಕಾರ್ಯಕ್ರಮದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಕ್ಷಮಾಪಣೆ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಜೊತೆಗೆ, ಮುಂದಿನ ಕಂಬಳಗಳಲ್ಲಿ ವ್ಯಾಖ್ಯಾನಕಾರರು (ಕಾಮೆಂಟೇಟರ್‌ಗಳು) ಮತ್ತು ನಿರ್ಣಾಯಕರು (ರಿಫರಿಗಳು) ಮಾತ್ರ ತಮ್ಮ ತಮ್ಮ ಕಾಮೆಂಟ್ರಿ ಬಾಕ್ಸ್‌ಗಳಲ್ಲಿ ಕುಳಿತುಕೊಳ್ಳಬೇಕು. ಅದರಲ್ಲಿ ಬೇರಾರಿಗೂ ಆಸನ ನೀಡಬಾರದು ಎಂದು ನಾವು ವಿನಂತಿಸುತ್ತೇವೆ.

ಇದು ಕಂಬಳದ ಗೌರವ, ಶಿಸ್ತು ಮತ್ತು ಪರಂಪರೆಯನ್ನು ಕಾಪಾಡಿಕೊಳ್ಳಲು ಅತ್ಯಂತ ಅಗತ್ಯವಾಗಿದೆ ಎಂದು ಕಂಬಳಾಭಿಮಾನಿಗಳು ಭೀಷ್ಮ ಗುಣಪಾಲ್‌ ಕಡಂಬ ಅಭಿಮಾನಿ ಬಳಗ ಎಂಬ ಹೆಸರಿನಲ್ಲಿ ಜಾಲತಾಣಗಳಲ್ಲಿ ಪೋಸ್ಟ್ ವೈರಲ್ ಆಗುತ್ತಿದೆ. ಈ ಕೃತ್ಯವನ್ನು ವಿರೋಧಿಸಲೆಂದೇ ಪ್ರತ್ಯೇಕ ವಾಟ್ಸಪ್ ಗ್ರೂಪ್ ಗಳು ರಚನೆಯಾಗುತ್ತಿವೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article