ಸಂತ್ರಸ್ತರ ಸಭೆ: ಮುಂದಿನ ಹೋರಾಟ ಚರ್ಚೆ
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನಡೆದ ದೌರ್ಜನ್ಯಕ್ಕೆ ಒಳಪಟ್ಟ ಸಂತ್ರಸ್ತರು ಇತ್ತೀಚಿಗೆ ಬೆಳ್ತಂಗಡಿಯಲ್ಲಿ ಸಭೆ ಸೇರಿ ಈವರೆಗಿನ ಬೆಳವಣಿಗೆಯ ಬಗ್ಗೆ ವಿಮರ್ಶೆ ನಡೆಸಿ ಮುಂದಿನ ಹೋರಾಟದ ರೂಪು ರೇಷೆ ಬಗ್ಗೆ ಚರ್ಚಿಸಿದರು.
ನ್ಯಾಯ ಸಿಗುವವರೆಗೆ ಹೋರಾಟ ಸುಸೂತ್ರವಾಗಿ ನಡೆಸಲು "ಧರ್ಮಸ್ಥಳ ದೌರ್ಜನ್ಯ ಸಂತ್ರಸ್ತರ ಸಮಿತಿ" ರಚನೆ ಮಾಡಿ ಆ ಮೂಲಕ ಮುಂದಿನ ರಣನೀತಿ ಬಗ್ಗೆ ಚರ್ಚೆ ಮಾಡಲಾಯಿತು.
ಈ ಸಭೆಯಲ್ಲಿ ಪ್ರಮುಖ 5 ನಿರ್ಣಯಗಳನ್ನು ಅಂಗೀಕರಿಸಲಾಯಿತು.
ಸೌಜನ್ಯ ತಾಯಿ ಕುಸುಮಾವತಿಯನ್ನು ಸಮಿತಿಯ ಸಂಚಾಲಕಿ ಆಗಿ ಆಯ್ಕೆ ಮಾಡಲಾಯಿತು. ಸರ್ಕಾರ ಅತವಾ ಯಾವುದೇ ಪ್ರಾದಿಕಾರದ ಮುಂದೆ ಸಮಿತಿ ಪರವಾಗಿ ಸಂಚಾಲಕಿಯು ಪ್ರತಿನಿಧಿಸಲಿರುವರು.
ಮುಂದಿನ ಹೋರಾಟದ ದಿಕ್ಕು ದೆಸೆ ನಿರ್ಧಾರ ಮಾಡಲು ಆಗಾಗ ಈ ಸಮಿತಿ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ನಿರ್ಧಾರ ಮಾಡಲಾಗುವುದು.
ಬಹಳ ದೀರ್ಘ ಕಾಲದಿಂದ ಧರ್ಮಸ್ಥಳ ದೌರ್ಜನ್ಯಗಳ ವಿರುದ್ಧ ಸೆಣಸಾಡುತ್ತಾ ಬಂದಿರುವ ಹಿರಿಯರಾದ ವಿಷ್ಣುಮೂರ್ತಿ ಭಟ್ ಹಾಗೂ ಸಾಮಾಜಿಕ ಕಾರ್ಯಕರ್ತ ರಾಬರ್ಟ್ ರೊಜಾರಿಯೋ ಇವರನ್ನು ಸಮಿತಿಯ ಗೌರವ ಸಲಹೆಗಾರರು ಆಗಿ ಆಯ್ಕೆ ಮಾಡಲಾಯಿತು. ಕುಸುಮಾವತಿ, ವಿಠ್ಠಲ ಗೌಡ, ಇಂದ್ರಾವತಿ, ಚಂದ್ರಾವತಿ, ಗಣೇಶ ಮೊದಲಾದವರಿದ್ದರು.
ಮುಂದೆ ಎಲ್ಲಾ ಧರ್ಮಸ್ಥಳ ದೌರ್ಜನ್ಯಕ್ಕೆ ಒಳಗಾದ ಸಂತ್ರಸರನ್ನು ಸಂಪರ್ಕಿಸಿ ಅವರನ್ನು ಈ ಸಮಿತಿಗೆ ಸೇರಿಸುವ ಮೂಲಕ ಎಲ್ಲರಿಗೂ ನ್ಯಾಯ ದೊರಕಿಸಿಕೊಡುವಲ್ಲಿ ಶ್ರಮಿಸಲು ತೀರ್ಮಾನಿಸಲಾಯಿತು.
ಎಂದು ರಾಬರ್ಟ್ ರೊಜಾರಿಯೋ ಪ್ರಕಟನೆಯಲ್ಲಿ ತಿಳಿಸಿದ್ದಾರೆ.