ಬಾಲಕಿ ನೇಣು ಬಿಗಿದು ಆತ್ಮಹತ್ಯೆ
Friday, December 5, 2025
ಕೊಣಾಜೆ: ಕೊಣಾಜೆ ಠಾಣಾ ವ್ಯಾಪ್ತಿಯ ಪಾವೂರು ಇನೋಳಿ ಎಂಬಲ್ಲಿ ಹದಿನಾರರ ಹರೆಯದ ಬಾಲಕಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಗುರುವಾರ ನಡೆದಿದೆ.
ಮೃತ ಬಾಲಕಿಯನ್ನು ಪಾವೂರು ಇನೋಳಿ ಕಾನ ನಿವಾಸಿ ರೈನಾಝ್(16) ಎಂದು ಗುರುತಿಸಲಾಗಿದೆ. ಈಕೆ ಎಸ್‌ಎಸ್‌ಎಲ್ ಸಿ ವಿದ್ಯಾಭ್ಯಾಸದ ಬಳಿಕ ಬ್ಯೂಟೀಷಿಯನ್ ಕೋರ್ಸ್‌ಗೆ ಸೇರಿದ್ದಳು. ಆರೋಗ್ಯದಲ್ಲಿ ತೊಂದರೆಯಿದೆ ಎಂದು ಗುರುವಾರ ಕೋರ್ಸ್‌ಗೂ ಹೋಗದೆ ಮನೆಯಲ್ಲಿಯೇ ಉಳಿದುಕೊಂಡಿದ್ದಳು ಎನ್ನಲಾಗಿದೆ.
ಗುರುವಾರ ಅಜ್ಜಿ ಹಾಗೂ ತಾಯಿ ಮನೆಯಲ್ಲಿಲ್ಲದ ವೇಳೆಯಲ್ಲಿ ರೈನಾಝ್ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.