ಡಿ.20ರಂದು ರೋಶ್ನಿ ಇಂಪ್ಯಾಕ್ಟ್ ಅವಾರ್ಡ್ ಪ್ರದಾನ
ಮಂಗಳೂರು: ನಗರದ ರೋಶನಿ ನಿಲಯ ಸ್ಕೂಲ್ ಆಫ್ ಸೋಶಿಯಲ್ ವರ್ಕ್ನ ರೋಶ್ನಿ ಅಲೂಮ್ನಿ ಅಸೋಸಿಯೇಶನ್ ಮೊದಲ ಬಾರಿಗೆ ರೋಶ್ನಿ ಇಂಪ್ಯಾಕ್ಟ್ ಅವಾರ್ಡ್ 2025ನ್ನು ಘೋಷಿಸಿದೆ. ಡಿ.20ರಂದು ಸಂಜೆ 5ಕ್ಕೆ ರೋಶನಿ ನಿಲಯ ಕ್ಯಾಂಪಸ್‌ನಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಕಮ್ಯೂನಿಟಿ ಕ್ಯಾಟಲಿಸ್ಟ್ ಅವಾರ್ಡ್‌ಗೆ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನ ಡಾ. ಎನ್. ಜೋಷುವ ಜಯಶೀಲನ್ ಅವರನ್ನು, ಮೈಂಡ್ ಮ್ಯಾಟರ್ಸ್ ಅವಾರ್ಡ್‌ಗೆ ನಿಮ್ಹಾನ್ಸ್‌ನ ಡಾ. ಅನಿಷ್ ವಿ. ಚೆರಿಯನ್, ಜಸ್ಟಿಸ್ ಟ್ರೇಲ್‌ಬ್ಲೇಜರ್ ಅವಾರ್ಡ್‌ಗೆ ಮಜ್ಲಿಸ್ ಲೀಗಲ್ ಸೆಂಟರ್ ಸಹ ಸಂಸ್ಥಾಪಕಿ, ವಕೀಲೆ ಫ್ಲೇವಿಯಾ ಅಗ್ನೆಸ್, ಅಥ್‌ರ್ ಗಾರ್ಡಿಯನ್ ಅವಾರ್ಡ್‌ಗೆ ಪರಿಸರ ಸಂರಕ್ಷಕ ಜೀತ್ ಮಿಲನ್ ರೋಚ್, ಕುಡ್ಲ ಬೀಕನ್ ಅವಾರ್ಡ್‌ಗೆ ಎನ್‌ಆರ್‌ಐ ದಾನಿ ಮೈಕೆಲ್ ಡಿಸೋಜ, ನಜ್ನೀನ್ ಅಬ್ದುಲ್ಲ ಯೆನೆಪೋಯ ಸ್ಪೆಷಲ್ ಜ್ಯೂರಿ ಅವಾರ್ಡ್‌ಗೆ ಪರ್ಕಿನ್ಸ್ ಇಂಡಿಯಾದ ಪೂನಂ ಪಾರ್ಧೇಶಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರೋಶ್ನಿ ಅಲೂಮ್ನಿ ಅಸೋಸಿಯೇಶನ್ ಅಧ್ಯಕ್ಷ ಆ ನಂದ್ ಡಿಸಿಲ್ವ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಡುಪಿನ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಫೌಂಡೇಶನ್ ಅಧ್ಯಕ್ಷ ಡಾ. ರವೀಂದ್ರನಾಥ ಶ್ಯಾನುಭಾಗ್, ಯುವ ಉದ್ಯಮಿ, ಯೂಟ್ಯೂಬರ್
ಅಹಮ್ಮದ್ ಕಬೀರ್ ಭಾಗವಹಿಸಲಿದ್ದಾರೆ. ಗಣ್ಯರನ್ನು ಒಳಗೊಂಡ ಜ್ಯೂರಿ ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ ಎಂದರು.
ಪ್ರಮುಖರಾದ ಪ್ರೊ. ಸೆಬಾಸ್ಟಿಯನ್, ಮಾಲಿನಿ ಹೆಬ್ಬಾರ್, ಲಿಡಿತ್, ಬ್ರಾಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.