‘ಪೇಸ್ ಸಿಲ್ವಥಾನ್ 2025’ ಮಾದಕ ವಸ್ತು ವಿರೋಧಿ ಜಾಗೃತಿ ಮ್ಯಾರಥಾನ್

‘ಪೇಸ್ ಸಿಲ್ವಥಾನ್ 2025’ ಮಾದಕ ವಸ್ತು ವಿರೋಧಿ ಜಾಗೃತಿ ಮ್ಯಾರಥಾನ್

ಮಂಗಳೂರು: ನಗರದ್ಥ ನಡುಪದವಿನಲ್ಲಿರುವ ಪಿ.ಎ. ಕಾಲೇಜ್ ಆಫ್ ಫಾರ್ಮಸಿ ಹಾಗೂ ಪಿ.ಎ. ಇನ್‌ಸ್ಟಿಟ್ಯೂಚ್ ಆಫ್ ಫಿಸಿಯೋಥೆರಪಿ ಸಂಸ್ಥೆಗಳ ವತಿಯಿಂದ ಪೇಸ್ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬ ಪೇಸ್ ಸಿಲ್ವಿಯೋರಾ’ ಆಚರಣೆಯ ಅಂಗವಾಗಿ ಪೇಸ್ ಸಿಲ್ವಥಾನ್ 2025- ಡ್ರಗ್ಸ್ ವಿರೋಧಿ ಜಾಗೃತಿ ಮ್ಯಾರಥಾನ್ ಡಿ.14ರ ಬೆಳಗ್ಗೆ 6.30 ರಿಂದ 8.30 ರವರೆಗೆ ಆಯೋಜಿಸಲಾಗಿದೆ.

ಶುಕ್ರವಾರದಂದು ಪ್ರೆಸ್ ಕ್ಲಬ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪಿ. ಎ. ಕಾಲೇಜ್ ಆಫ್ ಫಾರ್ಮಸಿಯ ಉಪಪ್ರಾಂಶುಪಾಲ ಡಾ.ಮುಹಮ್ಮದ್ ಮುಬೀನ್, ಮಾದಕ ವಸ್ತು ದುರುಪಯೋಗ ತಡೆಗಟ್ಟುವ, ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಮ್ಯಾರಥಾನ್ ಆಯೋಜಿಸಿರುವುದಾಗಿ ತಿಳಿಸಿದರು.

ಮ್ಯಾರಥಾನ್ ಮೂಲಕ ಯುವಜನರಲ್ಲಿ ಮಾದಕ ವಸ್ತು ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದು ಹಾಗೂ ಆರೋಗ್ಯಕರ, ಶಿಸ್ತುಬದ್ಧ  ಜೀವನಶೈಲಿಯ ಸಂದೇಶವನ್ನು ಸಮಾಜಕ್ಕೆ ತಲುಪಿಸಲಾಗುವುದು. ಮ್ಯಾರಥಾನ್ ಮಂಗಳೂರು ಪುರಭವನದಲ್ಲಿ ಉದ್ಘಾಟನಾ ಸಮಾರಂಭದೊಂದಿಗೆ ಆರಂಭಗೊಳ್ಳಲಿದ್ದು, ಅನಂತರ ಉರ್ವಾ ಮೈದಾನದ ವರೆಗೆ ಜಾಗೃತಿ ಓಟ ನಡೆಯಲಿದೆ ಎಂದು ತಿಳಿಸಿದರು.

ಈ ಮ್ಯಾರಥಾನ್‌ನಲ್ಲಿ ಸುಮಾರು 700 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಜೊತೆಗೆ ಮಂಗಳೂರಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೂ ಈ ಜಾಗೃತಿ ಅಭಿಯಾನದಲಿ  ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಪಿ.ಎ. ಎಜುಕೇಶನಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿಅಬ್ದುಲ್ಲಾ ಇಬ್ರಾಹಿಂ, ಪಿಎಇಟಿ ಕ್ಯಾಂಪಸ್ ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಶರ್ಫುದ್ದೀನ್ ಪಿ.ಕೆ., ನಗರದ ವಿವಿಧ ಅಧಿಕಾರಿಗಳು ಮತ್ತು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು. 

ಪತ್ರಿಕಾಗೋಷ್ಠಿಯಲ್ಲಿ ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ಪ್ರಾಂಶುಪಾಲ ಡಾ.ಸಲೀಮುಲ್ಲಾ ಖಾನ್, ಪಿ.ಎ. ಇನ್ಸಿಟ್ಯೂಚ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲೆ ಡಾ. ಅಫೀಫ ಸಲೀಂ, ಪಿ.ಎ. ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಸರ್ಫರಾಝ್ ಜೆ. ಹಾಶಿಂ, ಪಿಎಇಟಿ ಕ್ಯಾಂಪಸ್‌ನ ಅಸಿಸ್ಟಂಚ್ ಜನರಲ್ ಮ್ಯಾನೇಜರ ಶರ್ಫುದ್ದೀನ್ ಪಿ.ಕೆ. ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article