ಡಿ.3 ಮತ್ತು 4 ರಂದು ‘ಶ್ರೀದೇವಿ ಸಂಭ್ರಮ 25’
ಮಂಗಳೂರು: ಕೆಂಜಾರಿನ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ರಾಷ್ಟ್ರ ಮಟ್ಟದ ವಾರ್ಷಿಕ ತಾಂತ್ರಿಕ, ಸಾಂಸ್ಕೃತಿಕ ಮತ್ತು ಮ್ಯಾನೇಜ್‌ಮೆಂಟ್ ಹಬ್ಬ ‘ಶ್ರೀದೇವಿ ಸಂಭ್ರಮ 25’ ಡಿ.3 ಮತ್ತು 4ರಂದು ಕಾಲೇಜಿನ ಕ್ಯಾಂಪಸ್‌ನಲ್ಲಿ ನಡೆಯಲಿದೆ.
ಐಬಿಎಂ ಇಂಡಿಯಾದ ಐಎಸ್‌ಎ ಎಕ್ಸ್‌ಪರ್ಟ್ ಲ್ಯಾಬ್‌ನ ಕೆರಿಯರ್ ಎಜುಕೇಶನ್ ರೀಜನಲ್ ಮ್ಯಾನೇಜರ್ ಮಧುಸೂದನ್ ರಾವ್ ಆರ್.ಡಿ. ಅವರು ‘ಶ್ರೀದೇವಿ ಸಂಭ್ರಮ 25’ನ್ನು ಉದ್ಘಾಟಿಸಲಿದ್ದಾರೆ. ಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಉಪಾಧ್ಯಕ್ಷ ನಿಧೀಶ್ ಶೆಟ್ಟಿ, ಟ್ರಸ್ಟಿ ಪ್ರಿಯಾಂಕಾ ಎನ್.ಶೆಟ್ಟಿ ಭಾಗವಹಿಸುವರು. ಎಂಬಿಎ ವಿಭಾಗದಿಂದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗಾಗಿ ‘ಎಶ್ಲಾನ್ 25’ ರಾಷ್ಟ್ರ ಮಟ್ಟದ ಮ್ಯಾನೇಜ್ ಮೆಂಟ್ ಮತ್ತು ಸಾಂಸ್ಕೃತಿಕ ಹಬ್ಬ ನಡೆಯಲಿದೆ. ಎಂಸಿಎ ವಿಭಾಗದಿಂದ ‘ ಮೇಧಾ 25‘ ರಾಷ್ಟ್ರ ಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲ ಮತ್ತು ನಿರ್ದೇಶಕ ಡಾ. ಕೆ.ಇ. ಪ್ರಕಾಶ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉಪ ಪ್ರಾಂಶುಪಾಲೆ ಡಾ. ನೇತ್ರಾವತಿ ಪಿ.ಎಸ್. ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಡಿ.೩ರಂದು ಥೈಕ್ಕುಡಂ ಬ್ರಿಡ್ಜ್ ತಂಡದಿಂದ ಮತ್ತು ಡಿ.೪ರಂದು ಡಿ.ಜೆ. ಸೋನಾಲ್ ಅವರಿಂದ ಸಂಗೀತ ಕಾರ್ಯಕ್ರಮ ಪ್ರಸ್ತುತಗೊಳ್ಳಲಿದೆ. ತಾಂತ್ರಿಕ ಹಬ್ಬದಲ್ಲಿ ವೆಬ್ ಡಿಸೈನಿಂಗ್, ಏರ್ ಕ್ರಾಫ್ಟ್ ಇನ್‌ವೆಸ್ಟಿಗೇಶನ್, ರೋಬೋ ಸೋಕರ್, ಡಿ ಕೋಡ್, ಮೆಗಾ ಸರ್ಕಿಟ್ ಬಿಲ್ಡ್ ಮೊದಲಾದ ಸ್ಪರ್ಧೆಗಳು ಮೊದಲ ದಿನ ನಡೆಯಲಿದೆ. ಸಾಂಸ್ಕೃತಿಕ ಹಬ್ಬದಲ್ಲಿ ರೀಲ್ಸ್ ನಿರ್ಮಾಣ, ಹಗ್ಗ ಜಗ್ಗಾಟ, ಟ್ರೆಶರ್ ಹಂಟ್, ಛಾತ್ರಚಿತ್ರ, ಹಾಡು, ನೃತ್ಯ, ಮುಖ ವರ್ಣಿಕೆ, ಗಲ್ಲಿ ಕ್ರಿಕೆಟ್ ಮೊದಲಾದ ಸ್ಪರ್ಧೆಗಳು ಎರಡನೇ ದಿನ ನಡೆಯಲಿದೆ ಎಂದರು.
ಶ್ರೀದೇವಿ ಸಂಭ್ರಮದ ಸಂಯೋಜಕಿ ಪ್ರೊ. ರಷ್ಮಾ ಜೈನ್, ಎಶ್ಲಾನ್ 25 ಸಂಯೋಜಕಿ ಡಾ. ಗಾಯತ್ರಿ ಬಿ.ಜೆ., ಮೇಧಾ 25 ಸಂಯೋಜಕಿ ಪ್ರೊ. ವಿದ್ಯಾ ರಾಣಿ ಉಪಸ್ಥಿತರಿದ್ದರು.