ಡಿ.6ರಂದು ಪೌರ ಸನ್ಮಾನ ‘ಭಾಸ್ಕರಾಭಿನಂದನ’
ಮಂಗಳೂರು: ಸಹಕಾರ, ಕಂಬಳ, ಕೃಷಿ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಕೊಡುಗೆ ನೀಡಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅಪೂರ್ವ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಕೊಳಕೆ ಇರ್ವತ್ತೂರು ಭಾಸ್ಕರ್ ಎಸ್. ಕೋಟ್ಯಾನ್ ಅವರಿಗೆ ಕರ್ನಾಟಕ ಸರಕಾರದ ಪ್ರತಿಷ್ಠಿತ ಸಹಕಾರ ರತ್ನ ಪ್ರಶಸ್ತಿ-2025 ಲಭಿಸಿದೆ. ಈ ಹಿನ್ನಲೆಯಲ್ಲಿ ಅವರ ಅಭಿಮಾನಿ ಬಳಗದ ವತಿಯಿಂದ ನಾಗರಿಕ ಪೌರ ಸನ್ಮಾನ ‘ಭಾಸ್ಕರಾಭಿನಂದನ’ ಕಾರ್ಯಕ್ರಮವನ್ನು ಡಿ.6ರಂದು ಮಧ್ಯಾಹ್ನ 3ರಿಂದ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಲಾಗಿದೆ.
ಮಧ್ಯಾಹ್ನ 3.45ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಸೊಲೂರು ಮಠದ ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾ?ಪತಿ ಶ್ರೀ ವಿಖ್ಯಾತನಂದ ಸ್ವಾಮೀಜಿ ಆಶೀರ್ವಚನ ನೀಡುವರು. ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕ್ಯಾ. ಬ್ರಿಜೇಶ್ ಚೌಟ ದ್ವೀಪ ಪ್ರಜ್ವಲನೆ ಮಾಡುವರು. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಭಾಸ್ಕರಾಭಿನಂದನ ಸನ್ಮಾನ ನೆರವೇರಿಸುವರು. ಅತಿಥಿಗಳಾಗಿ ಶಾಸಕರಾದ ವೇದವ್ಯಾಸ ಕಾಮತ್, ಐವನ್ ಡಿಸೋಜ, ಕಿಶೋರ್ ಕುಮಾರ್ ಪುತ್ತೂರು, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷ ನವೀನ್‌ಚಂದ್ರ ಡಿ. ಸುವರ್ಣ, ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ದೀಪಾ ಕಂಫರ್ಟ್ ಆಡಳಿತ ನಿರ್ದೇಶಕಿ ಉರ್ಮಿಳಾ ರಮೇಶ್ ಕುಮಾರ್ ಭಾಗವಹಿಸಲಿದ್ದಾರೆ ಎಂದು ಭಾಸ್ಕರಾಭಿನಂದನಾ ಸಮಿತಿ ಸಂಚಾಲಕ ಚಿತ್ತರಂಜನ್ ಬೋಳಾರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಳಕೆ ಇರ್ವತ್ತೂರು ಭಾಸ್ಕರ್ ಎಸ್. ಕೋಟ್ಯಾನ್ ಅವರು ಕಳೆದ 42 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕಂಬಳ, ವಿವಿಧ ಸಹಕಾರ ಸಂಘಗಳಲ್ಲಿ ಅಧ್ಯಕ್ಷ, ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಹಕಾರ ರತ್ನ ಪ್ರಶಸ್ತಿ ಪಡೆದ ಹಿನ್ನೆಲೆಯಲ್ಲಿ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದರು.
ವಿಶೇಷ ಆಹ್ವಾನಿತರಾಗಿ ಡಾ. ಉದಯಚಂದ್ರ ಡಿ. ಸುವರ್ಣ, ಶರತ್‌ಚಂದ್ರ ಸನಿಲ್, ಮಂಜುನಾಥ್ ಪೂಜಾರಿ, ಸದಾಶಿವ ಉಳ್ಳಾಲ್, ಎಚ್. ಸಾಯಿರಾಮ್, ಜಯರಾಜ್ ಸೋಮಸುಂದರ್, ಡಾ. ಸದಾನಂದ ಪೂಜಾರಿ, ಚಿತ್ತರಂಜನ್ ಗರೋಡಿ, ಬಿ.ಎನ್. ಶಂಕರ್ ಪೂಜಾರಿ, ಆರ್. ಪದ್ಮರಾಜ್, ಪಿತಾಂಬರ ಹೆರಾಜೆ, ರಕ್ಷಿತ್ ಶಿವರಾಂ, ಚಂದ್ರಹಾಸ ಅಡ್ಯಂತಾಯ, ಗಣೇಶ್ ಶೆಟ್ಟಿ, ಜಗದೀಪ್ ಡಿ. ಸುವರ್ಣ, ಅನಿಲ್ ಶೆಟ್ಟಿ ಮನ್ಕುತೋಟಗುತ್ತು, ಪ್ರಶಾಂತ್ ಸನಿಲ್, ಮನೋಜ್ ಸರಿಪಲ್ಲ, ಶರಣ್ ಪಂಪ್‌ವೆಲ್, ರವೀಂದ್ರ ಕಂಬಳಿ, ಸು?ರ್ ಕುಮಾರ್, ಗೀತಾಂಜಲಿ ಸುವರ್ಣ. ಲೀಲಾಕ್ಷ ಬಿ. ಕರ್ಕೇರ, ಜಯಂತ್ ನಡುಬೈಲ್, ಜಯ ವಿಕ್ರಂ, ಸುರೇಶ್ ಕೆ. ಪೂಜಾರಿ, ಎಂ.ಎಸ್. ಕೋಟ್ಯಾನ್, ಹರೀಶ್ ಜಿ. ಸಾಲ್ಯಾನ್, ಅಕ್ಷಿತ್ ಸುವರ್ಣ, ಭುವನೇಶ್ ಪಚ್ಚಿನಡ್ಕ, ಚಂದ್ರಶೇಖರ್ ನಾನಿಲ್, ವಾಮನ್ ಕೆ. ಭಾಗವವಹಿಸುವರು. ಮಧ್ಯಾಹ್ನ ೩ರಿಂದ ಚಲನಚಿತ್ರ ನಟ ಮಂಜು ರೈ ಮುಳೂರು ಅವರ ಹಾಸ್ಯ ನಿರೂಪಣೆಯೊಂದಿಗೆ ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ಸಂಗೀತ, ಹಾಸ್ಯ, ಲಹರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಭಾಸ್ಕರಾಭಿನಂದನಾ ಸಮಿತಿ ಪ್ರಧಾನ ಸಂಚಾಲಕ ಸದಾನಂದ ಪೂಜಾರಿ, ಸಂಚಾಲಕರಾದ ಕೆ.ಟಿ. ಸುವರ್ಣ, ಅವಿನಾಶ್ ಸುವರ್ಣ, ನಿಶಾನ್ ಪೂಜಾರಿ, ಸುಧಾಕರ್ ಕರ್ಕೇರ ಮತ್ತು ಸಂತೋಷ್ ಬಂಗೇರ ಉಪಸ್ಥಿತರಿದ್ದರು.