ಲಯನ್ಸ್ ಪ್ರಾಂತೀಯ ಸಮ್ಮೇಳನ ‘ಆತ್ರೇಯ‘
ಮಂಗಳೂರು: ಲಯನ್ಸ್ ಜಿಲ್ಲೆ 317ಡಿ ಪ್ರಾಂತ್ಯ 4ರ ಪ್ರಾಂತೀಯ ಸಮ್ಮೇಳನ ‘ಆತ್ರೇಯ‘ ಡಿ.6 ರಂದು ಮಧ್ಯಾಹ್ನ 3.30ರಿಂದ ಬಿಜೈ ಚರ್ಚ್ ಸಭಾಂಗಣದಲ್ಲಿ ನಡೆಯಲಿದೆ.
ಪ್ರಾಂತೀಯ ಸಮ್ಮೇಳನದ ಅಧ್ಯಕ್ಷೆ ವಿದ್ಯಾ ಕಾಮತ್ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಅಶೋಕ್ ಕಾಮತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಲಯನ್ಸ್ ಮಾಜಿ ಗವರ್ನರ್ ಮತ್ತು ಗ್ಯಾಲೆಂಟರಿ ಶೌರ್ಯ ಪದಕ ಪುರಸ್ಕೃತ ಡಾ. ಪಿ.ಆರ್ .ಎಸ್. ಚೇತನ್ ಮತ್ತು ಚಿತ್ರನಟ ಕಾಸರಗೋಡು ಚಿನ್ನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷೆ ಗೀತಾ ರಾವ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದ ಹಿನ್ನೆಲೆಯಲ್ಲಿ ಸೇವಾ ಕಾರ್ಯಕ್ರಮದ ಭಾಗವಾಗಿ ತೇಜಸ್ವಿನಿ ಆಸ್ಪತ್ರೆಯ ಲಯನ್ಸ್ ಡಯಾಲಿಸಿಸ್ ಸೆಂಟರ್‌ಗೆ ದೇಣಿಗೆ ಮತ್ತು ಮೂಡುಬಿದಿರೆ ಸ್ಪೂರ್ತಿ ಭಿನ್ನಸಾಮರ್ಥ್ಯದ ಮಕ್ಕಳ ಸಂಸ್ಥೆಗೆ ನೆರವು ನೀಡಲಾಗುವುದು ಎಂದರು.
ಲಯನ್ಸ್ ಪ್ರಾಂತೀಯ ಅಧ್ಯಕ್ಷೆ ವಿದ್ಯಾ ಕಾಮತ್, ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಗಣೇಶ್ ಶೆಟ್ಟಿ, ವಲಯಾಧ್ಯಕ್ಷರಾದ ಆಶಾ ಚಂದ್ರಮೋಹನ್, ಮೊಹಮ್ಮದ್ ಇಕ್ಬಾಲ್, ಪ್ರಾಂತೀಯ ರಾಯಭಾರಿ ಜಯಪ್ರಕಾಶ್, ಸಾರ್ವಜನಿಕ ಸಂಪರ್ಕಾ?ಕಾರಿ ಶ್ರೀಧರ್ ಶೆಟ್ಟಿಗಾರ್ ಉಪಸ್ಥಿತರಿದ್ದರು.