ಫೇ ಕಾರ್ವಾಲೋ ಅವರಿಗೆ ಚಿನ್ನದ ಪದಕ
Wednesday, December 17, 2025
ಮಂಗಳೂರು: ಗೋವಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಗ್ರಾಪ್ಲಿಂಗ್ ವಿಭಾಗದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಗ್ರೌಂಡ್ ಬಾರ್ನ್ ಫೈಟ್ ಕ್ಲಬ್ ಆಂಡ್ ಫಿಟ್‌ನೆಸ್ ಜಿಮ್‌ನ ಫೇ ಕಾರ್ವಾಲೋ ಅವರು 60 ಕೆಜಿ ವಿಭಾಗದಲ್ಲಿ ಅಬುದಾಭಿ ಕಾಂಬಾಟ್ ಕ್ಲಬ್ (ADCC) ಪ್ರಾಯೋಜಿಸಿದ್ದ ಪಂದ್ಯದಲ್ಲಿ ಚಿನ್ನದ ಪದಕವನ್ನು ಪಡೆದಿರುತ್ತಾರೆ.
ಇವರು ಗ್ರೌಂಡ್ ಬಾರ್ನ್ ಫೈಟ್ ಕ್ಲಬ್ ಆಂಡ್ ಫಿಟ್‌ನೆಸ್ ಜಿಮ್‌ನ ಮುಖ್ಯ ತರಬೇತುದಾರ ಶಿಶಿರ್ ಪೂಜಾರಿ ಹಾಗೂ ತರಬೇತುದಾರ ರೋಶನ್ ಡಿ’ಕುನ್ಹ ಅವರಿಂದ ತರಬೇತಿ ಪಡೆದಿದ್ದಾರೆ.