ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ಸಂಚರಿಸುವ ರಸ್ತೆಯ ಅವ್ಯವಸ್ಥೆಯ ಕೇಳುವವರಾರು?: ಡಿ.ವೈ.ಎಫ್.ಐ. ಪ್ರಶ್ನೆ

ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ಸಂಚರಿಸುವ ರಸ್ತೆಯ ಅವ್ಯವಸ್ಥೆಯ ಕೇಳುವವರಾರು?: ಡಿ.ವೈ.ಎಫ್.ಐ. ಪ್ರಶ್ನೆ


ಮಂಗಳೂರು: ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ಸಂಚರಿಸುವ ರಸ್ತೆಯಿಂದಾಗಿ ದಿನೇ ದಿನೇ ಸಮಸ್ಯೆಗಳು ಎದುರಾಗುತ್ತಿದ್ದು,  ಯಾವ ಅಧಿಕಾರಿಗಳು, ಶಾಸಕರು, ಮಂತ್ರಿಗಳು ಇದರತ್ತ ಗಮನಹರಿಸದಿರುವುದು ಈ ದುಸ್ಥಿತಿಗೆ ಕಾರಣವಾಗಿದೆ ಎಂದು ಡಿ.ವೈ.ಎಫ್.ಐ. ಬೆಳ್ತಂಗಡಿ ತಾಲೂಕು ಸಮಿತಿ ಆಪಾದಿಸಿದೆ.

ಈ ರಸ್ತೆಯ ಮರುಡಾಮರೀಕರಣಕ್ಕೆ ಆಗ್ರಹಿಸಿ ಸರಕಾರಕ್ಕೆ ಮನವಿ ನೀಡಿ ಡಿ.ವೈ.ಎಫ್.ಐ. ಡಿ.ವೈ.ಎಫ್.ಐ. ಈ ಹೇಳಿಕೆ ನೀಡಿದ್ದಾಗಿದೆ. ಇಲ್ಲಿನ ರಸ್ತೆ ಹೊಂಡ-ಗುಂಡಿಗಳನ್ನು ಒಳಗೊಂಡು ಮರಣ ಬಾವಿಯಂತೆ ಬಾಯಿ ಬಿಡುತ್ತಿದೆ ಎಂದು ಆಪಾದಿಸಿದ ಡಿ.ವೈ.ಎಫ್.ಐ. ತಾಲೂಕು ಅದ್ಯಕ್ಷರಾದ ಅಧಿತಿ ಕೊಯ್ಯೂರು ಹಾಗೂ ಕಾರ್ಯದರ್ಶಿ ಅಭಿಷೇಕ್ ಪದ್ಮುಂಜ ಅವರು  ಇದೇ ಮಾರ್ಗದಲ್ಲಿ ಇತ್ತೀಚಿಗೆ ಬಂದ ನಮ್ಮ ಮೈಸೂರು ಮಹಾರಾಜರು ಅದು ಹೇಗೆ ಬಂದರೋ ಯಾರಿಗೂ ತಿಳಿದಿಲ್ಲ ಎಂದು ಹೇಳಿದರು. ಇಲ್ಲಿನ ಜನರು ಇಲ್ಲಿನ ಗುಂಡಿಗಳಲ್ಲಿ ಬಾಳೆ ಗಿಡಗಳನ್ನು ನೆಟ್ಟು ತಮ್ಮ ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅದಲ್ಲದೆ ರಸ್ತೆ ಬದಿಯ ಅಂಗಡಿ ವ್ಯಾಪಾರಸ್ತರ ಪಾಡು ಯಾರಿಗೂ ಬೇಡ. ತಮ್ಮಲ್ಲಿರುವ ವಸ್ತುಗಳನ್ನು ವ್ಯಾಪಾರ ಮಾಡಲು ಅವರಿಗೆ ಇದು ಹೊಸತು ಎಂಬುದನ್ನು ಹೇಳಲು ಸಾಧ್ಯವಿಲ್ಲ. ಇಲ್ಲಿ ಸಂಚರಿಸುವ, ವಿದ್ಯಾರ್ಥಿಗಳು, ಇತರೆ ಜನಸಾಮಾನ್ಯರು ಹಾಗೆಯೇ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಕೂಡ ಮಣ್ಣು, ದೂಳುಗಳನ್ನು ಉಸಿರಾಡಿ ಜೀವಿಸುವಂತಾಗಿದೆ.

ಇದನ್ನು ಮನಗಂಡು ಬೆಳ್ತಂಗಡಿ ತಾಲೂಕಿನ DYFI ಯುವಜನ ಸಂಘಟನೆ ಇಂದು ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕರಿಗೆ ಇಂಜಿನಿಯರ್ ಗೆ ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭಿಸಬೇಕೆಂದು ಮನವಿ ಮಾಡಲಾಯಿತು. ಇಲ್ಲವಾದಲ್ಲಿ ಕುಪ್ಪೆಟ್ಟಿಯಲ್ಲಿ ಈ ತಿಂಗಳ ಅಂತ್ಯದೊಳಗೆ ಪ್ರತಿಭಟನೆಯನ್ನು ಕೈಗೊಳ್ಳುವುದಾಗಿ ತಿಳಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕಾರ್ಯಪಾಲಕರಾದ ಶ್ರೀ ಬಕ್ಕಪ್ಪ ರವರು ಈಗಾಗಲೇ ಸರಕಾರದಿಂದ ತಮಗೆ, "ಪ್ಯಾಚ್ ವರ್ಕ್" ಮಾಡಲು ಮಾತ್ರ ಅನುದಾನ ಬಂದಿರುವುದು, ರಸ್ತೆ ಕಾಮಗಾರಿಗೆ ಹಣ ಇನ್ನೂ ಬಂದಿಲ್ಲ ಮುಂದಿನ ಎರಡು-ಮೂರು ತಿಂಗಲೊಳಗೆ ಬರಬಹುದು ಎಂದು ತಿಳಿಸಿದ್ದಾರೆ. ಆದರೆ ಈ ಪ್ಯಾಚ್ ವರ್ಕ್ ಕೆಲಸವನ್ನು ಆದಷ್ಟು ಬೇಗ ಪ್ರಾರಂಭಿಸುವುದಾಗಿ ಮಾತು ನೀಡಿರುತ್ತಾರೆ.

ಈ ಸಂಧರ್ಭದಲ್ಲಿ DYFI ಬೆಳ್ತಂಗಡಿ ತಾಲೂಕು ಅಧ್ಯಕ್ಷರು ಕಾರ್ಯದರ್ಶಿಗಳ ಜೊತೆ ಸಹಕಾರ್ಯದರ್ಶಿಗಳಾದ ವಿನುಷರಮಣ ಪಟ್ರಮೆ, ಅಶ್ವಿತಾ ಕುತ್ಲೂರು, ಸದಸ್ಯರಾದ ಈಶ್ವರಿ ಪದ್ಮುಂಜ ಮತ್ತಿತರರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article