ಮಂಗಳೂರಿನ ಜೆಪ್ಪು ಮಹಾಕಾಳಿಪಡ್ಪು ರೈಲ್ವೆ ಅಂಡರ್ಪಾಸ್ ರಸ್ತೆ ಉದ್ಘಾಟನೆ
ಈಗ ಕೇವಲ ಒಂದು ಭಾಗದಲ್ಲಿ ಮಾತ್ರ ಕಾಮಗಾರಿ ಮುಗಿದಿದ್ದು, ಆದರೆ ಇನ್ನೊಂದು ಭಾಗದಲ್ಲಿ ಅಂಡರ್ ಪಾಸ್ ರಸ್ತೆಯ ಕಾಮಗಾರಿ ಹಾಗೇಯೇ ಉಳಿದಿದ್ದು, ಇದನ್ನು ಕೂಡಲೇ ಮುಗಿಸುವಂತೆ ಒತ್ತಾಯಿಸಿದರು.
ಸ್ಮಾರ್ಟ್ ಸಿಟಿಯ ನಿರ್ದೇಶಕರು ಸ್ಥಳಕ್ಕೆ ಭೇಟಿ ನೀಡಿ ಇದನ್ನು ಕೂಡಲೇ ಕಾಮಗಾರಿ ಮುಗಿಸಿಕೊಡುವುದಾಗಿ ತಿಳಿಸಿದರು. ಅದರೆ ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಐವನ್ ಡಿ’ಸೋಜಾ ನೇತೃತ್ವದಲ್ಲಿ ಯಾರೂ ಒಪ್ಪದೇ ಇದ್ದಾಗ ನಮ್ಮ ವಾಹನಗಳಿಗೆ ಬಿಟ್ಟು ಕೊಡಲು ಅನುಮೋದಿಸಿದ್ದು, ಮತ್ತು ಈ ಒಂದು ಭಾಗದ ರಸ್ತೆಯಲ್ಲಿ ತಮ್ಮ ವಾಹನದ ಜೊತೆಗೆ ಕಾರ್ಯಕರ್ತರ ವಾಹನವನ್ನು ಜೆಪ್ಪು ಮೋರ್ಗನ್ಸ್‌ಗೇಟ್ ಜೆಪ್ಪಿನಮೊಗರು ಕಡೆಯಿಂದ ರಾಷ್ಟ್ರೀಯ ಹೆದ್ದಾರಿಗೆ ವಾಹನವನ್ನು ಸಂಚರಿಸುವ ಮೂಲಕ ರಸ್ತೆಯನ್ನು ಉದ್ಘಾಟಿಸಲಾಯಿತು.
ಈ ರಸ್ತೆಯನ್ನು ನಿರ್ಮಾಣ ಮಾಡಲು, ಸಾಕಷ್ಟು ಸಮಯ ನೀಡಿದರೂ ಕೇಂದ್ರ ಸರಕಾರ ಮತ್ತು ರಾಜ್ಯದ ಸ್ಥಳೀಯ ಶಾಸಕರು, ಲೋಕಸಭಾ ಸದಸ್ಯರು ಸಂಪೂರ್ಣ ವಿಫಲರಾಗಿದ್ದಾರೆ. ಲೋಕಸಭಾ ಸದಸ್ಯರು ಈ ಬಗ್ಗೆ ಕಾಳಜಿ ವಹಿಸದೇ ಜನರನ್ನು ಇವತ್ತು ಸಂಕಷ್ಟಕ್ಕೀಡು ಮಾಡಿದ್ದಾರೆ. ಲೋಕಸಭಾ ಸದಸ್ಯರು ಮತ್ತು ಶಾಸಕರು ಎನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರಲ್ಲದೇ, ನಾಳೆಯಿಂದ ಈ ಭಾಗದಲ್ಲಿ ರಸ್ತೆಗಳಲ್ಲಿ ವಾಹನಗಳಲ್ಲಿ ಸಂಚರಿಸುವ ಮೂಲಕ ಯಾವುದೇ ತೊಂದರೆಯಿಲ್ಲದೇ ಈ ರಸ್ತೆಯಲ್ಲಿ ಸಂಚರಿಸಬಹುದು ಎಂದು ತಿಳಿಸಿದರು.
ಸೌತ್ ಬ್ಲಾಕ್ ಅಧ್ಯಕ್ಷ ಸಲೀಂ, ಭಾಸ್ಕರ್ ರಾವ್, ನವಾಜ್ ಜೆಪ್ಪು, ನೆಲ್ಸನ್ ರೋಚೆ, ಅಮೃತ್ ಕದ್ರಿ, ಮನೀಷ್ ಬೋಳಾರ್, ಕವಿತಾ ವಾಸು, ರಮಾನಂದ ಪೂಜಾರಿ, ಸತೀಶ್ ಪೆಂಗಲ್, ಅಲ್ಟ್ಟೀನ್ ಡಿಕುನ್ಹ, ಸುಧಾಕರ್ ಜೆಪ್ಪಿಮೊಗರು, ಹೈದರ್ ಬೋಳಾರ್, ಅನಿಲ್ ರಸ್ಕೀನ್, ಚಂದ್ರಕಲಾ ಜೋಗಿ, ಪವಿತ್ರಾ, ಶಾಲಿನಿ, ಬಬಿತಾ, ನಮಿತಾ ರಾವ್, ನೀತು ಡಿಸೋಜಾ, ವಿದ್ಯಾ ಅತ್ತಾವರ್, ಟಿ.ಸಿ ಗಣೇಶ್, ಅಪ್ಪಿಲತಾ, ದಿನೇಶ್ ಪಾಂಡೇಶ್ವರ, ಹಬೀಬುಲ್ಲ ಮತ್ತಿತರರು ಉಪಸ್ಥಿತರಿದ್ದರು.