ಕರ್ತವ್ಯ ಲೋಪ ಎಸಗಿದ ವಿಜಯ ನರ್ಸಿಂಗ್ ಹೋಮ್ ನ ವೈದ್ಯರಾದ ಡಾಕ್ಟರ್ ಮೇಕಲರ ಮೇಲೆ ಕ್ರಮಕ್ಕೆ ಒತ್ತಾಯ, ಸಂತ್ರಸ್ತೆ ದಿವ್ಯ ನವೀನ್ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ
ಕೇವಲ ಮಗುವಿಗೆ ಉಸಿರಾಟದ ಸಮಸ್ಯೆ ಇದೆ ಎಂದು ತಿಳಿಸಿ ಕೂಡಲೇ ಹೆಚ್ಚಿನ ಚಿಕಿತ್ಸೆಗೆ ಅತ್ತಾವರ ಖಾಸಗೀ ಆಸ್ಪತ್ರೆಗೆ ದಾಖಲಿಸಿದ ನಂತರವಷ್ಟೇ ಮಗು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿರುತ್ತಾರೆ. ನಂತರ ಹಣಕಾಸಿನ ಸಮಸ್ಯೆ ಎದುರಿಸುತ್ತಿದ್ದ ಕುಟುಂಬ ಮಗುವನ್ನು ವೆನ್ಲಾಕಿನ ಮಕ್ಕಳ ಆಸ್ಪತ್ರೆಗೆ ದಾಖಲಿಸಿ ನ.30 ರಂದು ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. ಶಸ್ತ್ರಚಿಕಿತ್ಸೆ ನಂತರ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗು ಡಿ.10 ರಂದು ಕೊನೆಯುಸಿರೆಳೆದಿದೆ.
ಮಗುವಿನ ಸಾವಿನಿಂದ ತಾಯಿ ದಿವ್ಯ ನವೀನ್ ಮತ್ತು ಮನೆ ಮಂದಿ ಮಾನಸಿಕವಾಗಿ ಕುಗ್ಗಿಹೋಗಿದ್ದು ಈ ಎಲ್ಲಾ ಸಮಸ್ಯೆಗಳಿಗೆ ವಿಜಯ ನರ್ಸಿಂಗ್ ಹೋಮ್ ನ ವೈದ್ಯರಾದ ಮೆಕಲಾ ಕಾರಣರಾಗಿರುತ್ತಾರೆ. ಮಗುವಿನ ಬೆಳವಣೆಗೆಗಳ ಬಗ್ಗೆ ಪ್ರತೀ ಬಾರಿ ಪರೀಕ್ಷೇ ಮಾಡುವಾಗ ಯಾವುದೇ ರೀತಿಯ ಮಾಹಿತಿಯನ್ನು ನೀಡಿದೆ ಕರ್ತವ್ಯ ಲೋಪ ಎಸಗಿರುತ್ತಾರೆ. ಮತ್ತು ಎಲ್ಲಾ ಬಗೆಯ ಪರೀಕ್ಷೆಗಳನ್ನು ತಮ್ಮ ಆಸ್ಪತ್ರೇಯಲ್ಲೇ ನಡೆಸಿ ತಪ್ಪಾದ ಮಾಹಿತಿಗಳನ್ನು ಒದಗಿಸಿರುತ್ತಾರೆ. ಕನಿಷ್ಟ 22ನೇ ವಾರದ ಪರೀಕ್ಷೆಗಳನ್ನು ಮಾಡಿದ ನಂತರವೂ ಮಗುವಿನ ಬೆಳವಣೆಗೆಗಳ ಕನಿಷ್ಟ ಮಾಹಿತಿಯನ್ನು ಕೂಡ ಒದಗಿಸದೇ ಗಂಭೀರವಾದ ತಪ್ಪನ್ನು ಎಸಗಿರುತ್ತಾರೆ.
ಈಗಾಗಲೇ ಬಾಣಂತಿ ದಿವ್ಯ ನವೀನ್ ಅವರು ತಮ್ಮ ಮಗುವನ್ನು ಕಳೆದುಕೊಂಡಿದ್ದಲ್ಲದೇ ಮಾನಸಿಕವಾಗಿ ವೇದನೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಿ ತಪ್ಪೆಸಗಿದ ವೈದ್ಯರ ವಿರುದ್ದ ಕ್ರಮ ಕೈಗೊಳ್ಳಬೇಕು ಹಾಗೂ ಬಾಣಂತಿ ದಿವ್ಯ ನವೀನ್ ಕುಟುಂಬಕ್ಕೆ ಗರಿಷ್ಟ ಪ್ರಮಾಣದ ನಷ್ಟ ಪರಿಹಾರ ಒದಗಿಸಿ ಕೊಡಲು ಮುಂದಾಗಬೇಕೆಂದು ಈ ಮೂಲಕ ಒತ್ತಾಯಿಸುತ್ತಿದ್ದೇವೆ.
ನಿಯೋಗದಲ್ಲಿ ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಂತ್ರಸ್ತೆ ದಿವ್ಯ ನವೀನ್, ನವೀನ್ ಅಮ್ಮುಂಜೆ, ಡಿವೈಎಫ್ಐ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ಕೃಷ್ಣ ಪೂಜಾರಿ, ಸಾಮಾಜಿಕ ಹೋರಾಟಗಾರ ಸಜಿತ್ ಶೆಟ್ಟಿ ವಾಮಂಜೂರು, ಹರಿಣಾಕ್ಷಿ, ನವೀನ್ ಮುಂತಾದವರು ಉಪಸ್ಥಿತರಿದ್ದರು.
