ಹವಾಮಾನ ಆಧಾರಿತ ಬೆಳೆ ವಿಮೆ ಕಡಿಮೆ ಪಾವತಿ: ಸತ್ಯಶೋಧನಾ ಸಮಿತಿ
Monday, December 15, 2025
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ನಿರೀಕ್ಷೆಯಂತೆ ಹವಾಮಾನ ಆಧಾರಿತ ಬೆಳೆ ವಿಮೆ ದೊರಕದೆ, ಬೆಳೆ ವಿಮೆ ಪರಿಹಾರ ಮೊತ್ತ ತೀರಾ ಕಡಿಮೆಯಾಗಿ ಬಿಡುಗಡೆಯಾಗಿದ್ದು, ಈ ತಾರತಮ್ಯದ ಬಗ್ಗೆ ಕೂಲಂಕುಷವಾಗಿ ಇದರಲ್ಲಾದ ಲೋಪವನ್ನು ಅಧ್ಯಯನ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಪ್ರಮುಖರುಗಳಾದ ರಾಕೇಶ್ ರೈ ಕೆಡಿಂಜಿ, ಶಾಂತಿಪ್ರಸಾದ್ ಹೆಗ್ಡೆ, ಮಾಧವ ಮಾವೆ, ರಾಜರಾಮ ಭಟ್, ಸಾಜ ರಾಧಕೃಷ್ಣ ಆಳ್ವ, ಗಣೇಶ್ ಗೌಡ, ಸದಾನಂದ ಉಂಗಿಲಬೈಲ್, ರಾಜೀವ ಶೆಟ್ಟಿ ಸಲ್ಲಾಜೆ, ಸೋಮಶೇಖರ ಸುಳ್ಯ, ಪದ್ಮನಾಭ ಗಟ್ಟಿ, ಹಾಗೂ ಜಯಂತ್ ಗೌಡ ಅವರನ್ನು ಒಳಗೊಂಡ ಸತ್ಯಶೋಧನಾ ಸಮಿತಿಯನ್ನು ನೇಮಿಸಲಾಗಿದೆ.
ಈ ಸತ್ಯಶೋಧನಾ ಸಮಿತಿಯು ಅಧ್ಯಯನ ನಡೆಸಿದ ವರದಿಯನ್ನು ಸರಕಾರದ ಗಮನಕ್ಕೆ ತಂದು, ಸೂಕ್ತ ಕ್ರಮಕ್ಕಾಗಿ ಆಗ್ರಹಿಸಲಾಗುವುದು ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.