ದ್ವೇಷ ಭಾಷಣ ಮಾಡಿರುವ ಬೈರತಿ ಮೇಲೆ ಕೇಸು ದಾಖಲಿಸಬೇಕು: ಸತೀಶ್ ಕುಂಪಲ
ಮಂಗಳೂರು: ಬೆಳಗಾಂ ಅಧಿವೇಶನದಲ್ಲಿ ಕರ್ನಾಟಕ ಕಾಂಗ್ರೆಸ್ ಸರಕಾರ ದ್ವೇಷ ಭಾಷಣ ಮಸೂದೆ ಮಂಡಿಸಿದ ಸಂದರ್ಭದಲ್ಲಿ ಮಂತ್ರಿಯಾಗಿರುವ ಸುರೇಶ್ ಬೈರತಿ ಅವರು ಕರಾವಳಿಗರು ಬೆಂಕಿ ಹಾಕುವವರು ಎಂಬ ರೀತಿಯಲ್ಲಿ ಪ್ರಚೋದನಕಾರಿಯಾಗಿ ಸದನದಲ್ಲೇ ಮಾತನಾಡಿರುವ ಅವರ ಮೇಲೆ ತಕ್ಷಣವೇ ಕೇಸು ದಾಖಲಿಸಬೇಕು ಎಂದು ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.
ಇದು ಕರಾವಳಿಯ ಮೇಲೆ ಮಾಡಿರುವ ಅಪಮಾನವಾಗಿದೆ. ಕರಾವಳಿಯ ವಿರುದ್ಧ ಕಾಂಗ್ರೆಸ್ ಮಂತ್ರಿಯವರು ಈ ರೀತಿ ರಾಜಾರೋಷವಾಗಿ ದ್ವೇಷಕಾರಿದ ಸಂಧರ್ಭದಲ್ಲಿ ಕರಾವಳಿಯವರೇ ಆಗಿರುವ ಸ್ಪೀಕರ್ ಸಮೇತ ಮೌನವಾಗಿರುವುದು, ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ. ತಕ್ಷಣವೇ ಕ್ರಮ ಕೈಗೊಂಡು ಕರಾವಳಿಯ ಜನರಲ್ಲಿ ಕ್ಷಮೆಯಾಚಿಸಬೇಕೆಂದು ತಿಳಿಸಿದರು.
ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಹಿಂದುಗಳ ಪರವಾಗಿ ಮಾತನಾಡುವವರ ವಿರುದ್ಧ ಕ್ರಮ ಜರಗಿಸಲು ಮಾಡಿರುವ ಮಸೂದೆಯಾಗಿದೆ. ಕಾಂಗ್ರೆಸ್ ಸರಕಾರ ಸದಾ ಹಿಂದು ವಿರೋಧಿ ನಡೆಯಿಂದ ಹೊರ ಬರುವ ಮನಸ್ಥಿತಿಯಲ್ಲಿ ಇಲ್ಲದಿರುವುದು ದುರಂತವಾಗಿದೆ ಎಂದು ಸತೀಶ್ ಕುಂಪಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.