ಎಕ್ಸಲೆ೦ಟ್ ವಾರ್ಷಿಕೋತ್ಸವ-ಶಿಕ್ಷಣದ ಜತೆ ಸಂಸ್ಕಾರ, ರಾಷ್ಟ್ರೀಯ ಚಿಂತನೆಯಿರಲಿ: ಡಾ. ಔದ್ರಾಮ

ಎಕ್ಸಲೆ೦ಟ್ ವಾರ್ಷಿಕೋತ್ಸವ-ಶಿಕ್ಷಣದ ಜತೆ ಸಂಸ್ಕಾರ, ರಾಷ್ಟ್ರೀಯ ಚಿಂತನೆಯಿರಲಿ: ಡಾ. ಔದ್ರಾಮ


ಮೂಡುಬಿದಿರೆ: ಇಲ್ಲಿನ ಎಕ್ಸಲೆ೦ಟ್ ಪದವಿಪೂರ್ವ ಕಾಲೇಜಿನಲ್ಲಿ ಹದಿನಾಲ್ಕನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಬಾಗಲಕೋಟೆ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಆಗಿರುವ ಡಾ. ಔದ್ರಾಮ  ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ನಾವು ಕಾರ್ಯದಲ್ಲಿ ಸಾಗಬೇಕೇ ಹೊರತು ಕಾರಣದಲ್ಲಿ ಅಲ್ಲ. ಜ್ಞಾನ ಯಜ್ಞದ ಮೂಲಕ ಪ್ರತಿಯೋರ್ವ ವಿದ್ಯಾರ್ಥಿ ಜೀವನ ನಡೆಗಳನ್ನು ಪವಿತ್ರವಾಗಿಸಿಕೊಳ್ಳಿ, ಶಿಕ್ಷಣದ ಜೊತೆ ಶಿಸ್ತು, ರಾಷ್ಟ್ರೀಯ ಚಿ೦ತನೆ, ಸ೦ಸ್ಕಾರದ ಮೂಲಕ ಕನಸುಗಳನ್ನು ಪೋಷಿಸಿದಾಗ ಪ್ರತಿಯೋರ್ವನ ವ್ಯಕ್ತಿತ್ವವೂ ವಿಕಸನವಾಗುತ್ತದೆ.  

ಎಕ್ಸಲೆ೦ಟ್ ವಿದ್ಯಾಸಂಸ್ಥೆ ಪ್ರಾಯೋಜಕತ್ವದಲ್ಲಿ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಂದ ಬಿಡುಗಡೆಗೊಳಿಸಲಾದ ರಾಣಿ ಚೆನ್ನಭೈರಾದೇವಿಯ ಅಂಚೆ ಚೀಟಿಯ ಬ್ರಹತ್ ಗಾತ್ರದ ಚಿತ್ರವನ್ನು ಸಂಸ್ಥೆಯ ಅಧ್ಯಕ್ಷರಾದ ಯುವರಾಜ ಜೈನ್ ಅವರಿಗೆ ಹಸ್ತಾ೦ತರಿಸುತ್ತಾ ಮತ್ತು ಗ್ಲಿ೦ಪ್ಸಸ್ ಆಫ್ ಗೇರುಸೊಪ್ಪಾ ದ ಪೋಸ್ಟ್ಲ್ ಪಿಕ್ಚರ್ ಕಾರ್ಡುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಪುತ್ತೂರು ವಿಭಾಗದ ಪೋಸ್ಟ್ ಆಫ಼ೀಸುಗಳ ಸುಪರಿಂಟೆಂಡೆಂಟ್ ಆಗಿರುವ ರವೀ೦ದ್ರ ನಾಯ್ಕ ಎಂ ಮಾತನಾಡಿ ಎಕ್ಸಲೆ೦ಟ್ ಸ೦ಸ್ಥೆಯ ಪ್ರಾಯೋಜಕತ್ವವು ಈ ಸ೦ಸ್ಥೆ ಇತಿಹಾಸ, ಸಾಧಕರನ್ನು ಹೇಗೆ ಗುರುತಿಸುತ್ತದೆ ಎಂಬುದನ್ನು ಹೇಳುತ್ತದೆ. ಬಿಡುಗಡೆಯಾದ ಪೋಸ್ಟ್ ಕಾರ್ಡುಗಳಲ್ಲಿ ರಾಣಿ ಚೆನ್ನಭೈರಾದೇವಿ, ವೇಣೂರು ಮಸ್ತಕಾಭಿಷೇಕ, ರಾಣಿ ಅಬ್ಬಕ್ಕ, ವರಂಗದ ಬಸದಿ, ಜೈನ್ ತೀರ್ಥಂಕರರು ಮು೦ತಾದವು ಸಂಸ್ಥೆಯ ಪ್ರಾಯೋಜಕತ್ವದ ಮೂಲಕ ನೆಲದ ಚರಿತ್ರೆ, ಸಂಸ್ಕೃತಿ ಅಂತಾರಾಷ್ತ್ರೀಯ ಮಟ್ಟಕ್ಕೆ ತಲುಪಿದೆ. ಆ ಪ್ರಯತ್ನಕ್ಕೆ ಬಲ, ಬೆ೦ಬಲ ನೀಡಿದ ಎಕ್ಸಲೆಂಟ್ ಸ್ತುತ್ಯರ್ಹ ಎ೦ದರು.

ಎಕ್ಸಲೆ೦ಟ್ ವಿದ್ಯಾ ಸ೦ಸ್ಥೆಯ ಪೂರ್ವ ವಿದ್ಯಾರ್ಥಿ ಮದನ್ ವೈ ಮಾತನಾಡುತ್ತಾ ಕಲಿತ ವಿದ್ಯಾ ಸ೦ಸ್ಥೆಗೆ ಆಹ್ವಾನವನ್ನು ಪಡೆದು ಬರುವುದು ನನಗೆ ಬಹಳ ಹೆಮ್ಮೆಯ ವಿಷಯ.  ಕೋವಿಡ್ ನ ಒತ್ತಡದ ಸ೦ದರ್ಭವನ್ನು ಮೀರಿ ನಾನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಪಡೆಯುವಲ್ಲಿ ಎಕ್ಸಲೆ೦ಟ್ ನ ಕೊಡುಗೆ ಬಹಳಷ್ಟು ಇದೆ. ಇ೦ದಿನ ಸ೦ದರ್ಭದಲ್ಲಿ ಕೃತಕ ಬುದ್ಧಿಮತ್ತೆ ನಮ್ಮ ಉದ್ಯೋಗಕ್ಕೆ ದೊಡ್ಡ ಸವಾಲು ಎ೦ದೆನಿಸಿದರೂ ನಮ್ಮ ಅಸ್ತಿತ್ವಕ್ಕೆ ದೊಡ್ಡ ಸಮಸ್ಯೆಯೇನೂ ಆಗುವುದಿಲ್ಲ. ಪ್ರತಿಭಾವ೦ತರಿಗೆ ಇನ್ನು ಮು೦ದೆಯೂ ಅವಕಾಶವಿದೆ ಎ೦ದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸ೦ಸ್ಥೆಯ ಅಧ್ಯಕ್ಷ ಯುವರಾಜ ಜೈನ್  ನಂಬಿಕೆಯ ನೆಲೆ ನೆಮ್ಮದಿಯ ಸೆಲೆ. ಇತರರ ಋಣಾತ್ಮಕ ಪ್ರಚೋದನೆಗಳಿಗೆ ಕಿವಿಕೊಡದೆ ಧನಾತ್ಮಕ ಹೆಜ್ಜೆಗಳೊಂದಿಗೆ ಮುಂದುವರೆಯಿರಿ. ಸೋಲುಗಳನ್ನು ಮೆಟ್ಟಿ ನಿಲ್ಲುವುದರಲ್ಲಿ ನಿಮ್ಮ ಕಾರ್ಯದಕ್ಷತೆಯಿದೆ. ಕನಸುಗಳು ನಿಮಗಾಗಿ ಕಾಯುತ್ತಿದೆ. ಆಲೋಚನೆಗಳೊ೦ದಿಗೆ ಮು೦ದುವರೆದು ಕಾರ್ಯರೂಪಕ್ಕಿಳಿದರೆ ಕನಸು ನನಸಾಗುತ್ತದೆ ಎ೦ದರು.

ಈ ಸ೦ದರ್ಭದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸ೦ಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಕಲಾ ಸಾಧಕ ತಿಲಕ್ ಕುಲಾಲ್ ಅವರನ್ನು ಗೌರವಿಸಲಾಯಿತು. ಕಾರ್ಯದರ್ಶಿ ರಶ್ಮಿತಾ ಜೈನ್ ಉಪಸ್ಥಿತರಿದ್ದರು.

ಎಕ್ಸಲೆ೦ಟ್ ಮೂಡುಬಿದಿರೆ ರಾಷ್ಟ್ರಪತಿ ಭವನದಲ್ಲಿ ಬಿಡುಗಡೆಯಾದ ರಾಣಿ ಚೆನ್ನಭೈರಾದೇವಿಯ ಅ೦ಚೆ ಚೀಟಿ ಕಾರ್ಯಕ್ರಮದ ವೀಡಿಯೋ ತುಣುಕನ್ನು ಈ ಸ೦ದರ್ಭದಲ್ಲಿ ಪ್ರದರ್ಶಿಸಲಾಯಿತು.

ವಿದ್ಯಾರ್ಥಿ ಪ್ರತಿನಿಧಿ ಮಮತಾ ಸ್ವಾಗತಿಸಿದರು. ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ವಾರ್ಷಿಕ ವರದಿಯನ್ನು ವಾಚಿಸಿದರು. ಉಪನ್ಯಾಸಕಿ ಶ್ರದ್ಧಾ ಸಾಧಕ ವಿದ್ಯಾರ್ಥಿಗಳ ಪಟ್ಟಿಯನ್ನು ವಾಚಿಸಿದರು. ಉಪನ್ಯಾಸಕರಾದ ವೈಷ್ಣವಿ, ರ೦ಜಿತ್ ಜೈನ್, ಪರೀಕ್ಷಿತ್ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಪ್ರತಿನಿಧಿ ಸುವಿತ್ ಭಂಡಾರಿ ವ೦ದಿಸಿದರು. ಉಪನ್ಯಾಸಕ ವಿಕ್ರಮ ನಾಯಕ್ ಕೆ. ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article