ಮಗು ತೊಟ್ಟಿಲು ಹಾಕುವ ಕಾಯ೯ಕ್ರಮದ ಮುನ್ನ ದಿನ ಅಪ್ಪ ಆತ್ಮಹತ್ಯೆ

ಮಗು ತೊಟ್ಟಿಲು ಹಾಕುವ ಕಾಯ೯ಕ್ರಮದ ಮುನ್ನ ದಿನ ಅಪ್ಪ ಆತ್ಮಹತ್ಯೆ


ಮೂಡುಬಿದಿರೆ: ತನ್ನ ಮಗುವಿನ ತೊಟ್ಟಿಲು ಹಾಕುವ ಕಾಯ೯ಕ್ರಮದ ಒಂದು ದಿನದ ಮೊದಲೇ ಅಪ್ಪನೋವ೯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ಮುಂಜಾನೆ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟುವಿನ ನೀರಲ್ಕೆಯಲ್ಲಿ ನಡೆದಿದೆ. 

ಕಲ್ಲಬೆಟ್ಟು ನೀರಲ್ಕೆಯ ನಿವಾಸಿ ಕೂಲಿ ಕಾಮಿ೯ಕ ಕೃಷ್ಣಪ್ಪ ಅವರ ಪುತ್ರ

ಸಂಜಯ್ ಯಾನೆ ಮುನ್ನಾ(26) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. 

ಶುಕ್ರವಾರ ರಾತ್ರಿವರೆಗೆ ಮನೆಯಲ್ಲಿಯೇ ಇದ್ದ ಸಂಜಯ್ ಅವರು ನಂತರ ಮನೆಯಿಂದ ಹೊರ ಹೋಗಿದ್ದಾರೆನ್ನಲಾಗಿದೆ.ಬೆಳಿಗ್ಗೆ

ಮನೆ ಹತ್ತಿರದ ಹಾಡಿಯಲ್ಲಿ‌ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. 

ಕೂಲಿ ಕಾಮಿ೯ಕರಾಗಿರುವ ಸಂಜಯ್ ಅವರು ಆಥಿ೯ಕ ಸಂಕಷ್ಟವನ್ನು ಅನುಭವಿಸುತ್ತಿದ್ದು ಇದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಸ್ಥಳೀಯರು ಸಂಶಯ ವ್ಯಕ್ತ ಪಡಿಸಿದ್ದಾರೆ. 

 ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article