ಕುವೆಂಪು ನಾಟಕಗಳಲ್ಲಿ ವಸ್ತು, ಆಕೃತಿ: ಶ್ರೀ ಮಹಾವೀರ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ
ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು ಮತ್ತು ಚಕೋರ ಸಾಹಿತ್ಯ ವಿಚಾರ ವೇದಿಕೆ, ದಕ್ಷಿಣ ಕನ್ನಡ ಸಹಯೋಗದೊಂದಿಗೆ ಮೂಡುಬಿದಿರೆಯ ಶ್ರೀ ಮಹಾವೀರ ಪದವಿಪೂರ್ವ ಕಾಲೇಜಿನಲ್ಲಿ ಕುವೆಂಪು ಅವರ ನಾಟಕಗಳ ವಸ್ತು ಮತ್ತು ಆಕೃತಿ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಯಕ್ಷರಂಗಾಯಣ, ಕಾರ್ಕಳ ಇದರ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ ಉಪನ್ಯಾಸ ನೀಡಿದರು. ಕುವೆಂಪು ಅವರು ಶ್ರೀ ರಾಮಾಯಣದರ್ಶನಂ ಮಹಾಕಾವ್ಯದ ಮೂಲಕ ನೀಡಿದ ವಿಶೇಷ ದಾರ್ಶನಿಕ ನೋಟವನ್ನು ವಿವರಿಸಿದರು. ಅವರು ವಸ್ತು ಮತ್ತು ಆಕೃತಿ ಪದಗಳ ಅರ್ಥವನ್ನು ಸರಳವಾಗಿ ವಿವರಿಸಿದರಲ್ಲದೆ, ಕುವೆಂಪು ಅವರ ಪ್ರಮುಖ ನಾಟಕಗಳಾದ ಶ್ಮಶಾನಕುರುಕ್ಷೇತ್ರಂ, ಜಲಗಾರ, ಮತ್ತು ಬೆರಳ್‌ಗೆ ಕೊರಳ್‌ಗಳ ಕಥಾವಸ್ತು ಮತ್ತು ಕಥನ ಶೈಲಿಯ ಕುರಿತು ವಿಶ್ಲೇಷಿಸಿದರು.
ಪಿಯು ಕಾಲೇಜಿನ ಪ್ರಾಂಶುಪಾಲೆ ಲೆಫ್ಟಿನೆಂಟ್ ವಿಜಯಲಕ್ಷ್ಮಿ ಅಧ್ಯಕ್ಷತೆವಹಿಸಿದರು.
ಚಕೋರ ಸಾಹಿತ್ಯ ವಿಚಾರ ವೇದಿಕೆಯ ದ.ಕ ಜಿಲ್ಲಾ ಸಂಚಾಲಕ ಸುಜಿತ್, ಉಡುಪಿ ಜಿಲ್ಲಾ ಸಂಚಾಲಕ ರಾಮಾಂಜಿ ಮತ್ತು ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಪ್ರೊ. ಹರೀಶ್ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಚಿನ್ನಸ್ವಾಮಿ ಎನ್. ಸ್ವಾಗತಿಸಿದರು. ವಿದ್ಯಾರ್ಥಿನಿ ಪರಮೇಶ್ವರಿ ವಂದಿಸಿದರು. ಕನ್ನಡ ಉಪನ್ಯಾಸಕಿ ಡಾ. ಚಂದನಾ ನಿರೂಪಿಸಿದರು.