ಮದುವೆ ಬಸ್ಸಿನಲ್ಲಿ ಹೆಬ್ಬಾವು
Tuesday, December 2, 2025
ಪುತ್ತೂರು: ಪುತ್ತೂರಿನಲ್ಲಿ ಮದುವೆ ಮುಗಿಸಿ ಹೆಬ್ರಿಗೆ ಹೋಗುವ ಮದುವೆಯ ಖಾಸಗಿ ಬಸ್ಸಿನಲ್ಲಿ ಹೆಬ್ಬಾವು ಪತ್ತೆಯಾದ ಘಟನೆ ಸೋಮವಾರ ನಡೆದಿದೆ.
ಮೂಡಬಿದಿರೆಯ ಹೋಟೆಲ್ ಗೋಳಿಬಜೆ ಸೆಂಟರ್‌ನಲ್ಲಿ ಚಹಾ ಕುಡಿಯುವುದಕ್ಕಾಗಿ ಬಸ್ಸನ್ನು ನಿಲ್ಲಿಸಲಾಗಿತ್ತು. ಚಾಲಕ ಬಸ್ಸನ್ನು ಗಮನಿಸಿದ ಸಂದರ್ಭದಲ್ಲಿ ಬೃಹತ್ ಗಾತ್ರದ ಹಾವು ಬಸ್ಸಿನೊಳಗೆ ಇರುವುದು ಗಮನಕ್ಕೆ ಬಂದಿದೆ. ಈ ಸಮಯದಲ್ಲಿ ಸ್ಥಳಿಯರ ಸಹಕಾರದಿಂದ ಹಾವು ಹಿಡಿಯುವ ದಿನೇಶ್ ಅವರನ್ನು ಸಂಪರ್ಕಿಸಿ ಅವರು ಬಂದು ಬಸ್ಸಿನೊಳಗೆ ಮಲಗಿದ್ದ ಹಾವನ್ನ ಹೊರತೆಗೆದರು. ನಂತರ ಹೆಬ್ಬಾವನ್ನು ಅರಣ್ಯ ಪ್ರದೇಶದೊಳಗೆ ಸುರಕ್ಷಿತವಾಗಿ ಬಿಡಲಾಗಿದೆ.