ಬೆಳ್ತಂಗಡಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ: ಎಸ್.ಡಿ.ಎಂ ಶಾಲೆಗೆ ಹಲವು ಪ್ರಶಸ್ತಿ, 13 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಕ್ಕೆ ಆಯ್ಕೆ
11 ಕ್ಲಸ್ಟರ್‌ಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ 40ಕ್ಕೂ ಹೆಚ್ಚಿನ ಸ್ಪರ್ಧೆಗಳ ಪೈಕಿ ಹಲವು ವಿಭಾಗಗಳಲ್ಲಿ ಬೆಳ್ತಂಗಡಿಯ ಎಸ್.ಡಿ.ಎಂ ಆಂಗ್ಲಮಾಧ್ಯಮ ಶಾಲೆಗೆ ಪ್ರಶಸ್ತಿಗಳು ಸಂದಿವೆ. ಈ ಮೂಲಕ 13 ವಿದ್ಯಾರ್ಥಿಗಳು ಡಿ.18 ರಂದು ಮೂಡುಬಿದಿರೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.
ಯಶ್ವಿತ್, ಕಿರಿಯ ಪ್ರಾಥಮಿಕ ವಿಭಾಗ ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ, ಎಂ. ರೀತಿಕಾ ಶೆಣೈ ಪ್ರೌಢಶಾಲಾ ವಿಭಾಗ ಹಿಂದಿ ಭಾಷಣ ಪ್ರಥಮ ಸ್ಥಾನ, ಜಾನಪದ ನೃತ್ಯ ಸಮೂಹ ನೃತ್ಯ ಸ್ಪರ್ಧೆ ಪ್ರೌಢಶಾಲಾ ವಿಭಾಗ ಪೂರ್ವಿ, ಪ್ರಾಪ್ತಿ, ಶ್ರೀರಕ್ಷಾ, ರಿಧು, ಸಂಜನಾ, ತೇಜಸ್ ಬಳಗ ಪ್ರಥಮ ಸ್ಥಾನ, ಪ್ರೌಢಶಾಲಾ ವಿಭಾಗದ ಕವಾಲಿ ಸ್ಪರ್ಧೆಯಲ್ಲಿ ಅನಘ, ಬಿ. ಸಹನಾ ಆಚಾರ್ಯ, ರಿಷಿತ, ಶ್ರೀವಿನೀತ್ ಎಮ್, ನಿಧೀಶ, ಶ್ರೇಯಸ್ ಬಳಗ ಪ್ರಥಮ ಸ್ಥಾನ ಪಡೆದು ಕೊಂಡಿರುತ್ತಾರೆ.
ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕನ್ನು ಪ್ರತಿನಿಧಿಸಲಿದ್ದಾರೆ. ಇವರಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಹಾಗೂ ಶಾಲೆಯ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿ ಸಮೂಹ ಅಭಿನಂದಿಸಿರುತ್ತಾರೆ.