ಕರ್ನಾಟಕ ದ್ವೇಷ ಭಾಷಣ ಮತ್ತು ಅಪರಾಧಗಳು ಮಸೂದೆ-25: ಅಂಗೀಕರಿಸದಂತೆ ರಾಜ್ಯಪಾಲರಿಗೆ ಮನವಿ

ಕರ್ನಾಟಕ ದ್ವೇಷ ಭಾಷಣ ಮತ್ತು ಅಪರಾಧಗಳು ಮಸೂದೆ-25: ಅಂಗೀಕರಿಸದಂತೆ ರಾಜ್ಯಪಾಲರಿಗೆ ಮನವಿ

ಬಂಟ್ವಾಳ: ಸಿ.ಎಂ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜಾರಿಗೊಳಿಸಲುದ್ದೇಶಿಸಿರುವ ಕರ್ನಾಟಕ ದ್ವೇಷ ಭಾಷಣ ಮತ್ತು ಅಪರಾಧಗಳು ಮಸೂದೆ-2025 ಅಂಗೀಕರಿಸದಂತೆ ಒತ್ತಾಯಿಸಿ ಬಿಜೆಪಿ ಮುಖಂಡ ಪ್ರಭಾಕರ ಪ್ರಭು ಅವರು ಕರ್ನಾಟಕ ರಾಜ್ಯಪಾಲ ಅವರಿಗೆ ಲಿಖಿತ ಮನವಿಯನ್ನು ಸಲ್ಲಿಸಿದ್ದಾರೆ.

ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷದ ಶಾಸಕರುಗಳು ವಿರೋಧದ ನಡುವೆಯೂ ಯಾವುದೇ ಚರ್ಚೆಗೆ ಅವಕಾಶ ನೀಡದೇ ಗೊಂದಲದ ಮಧ್ಯೆ ವಿಧಾನ ಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಏಕ ಪಕ್ಷೀಯವಾಗಿ ಅಂಗೀಕರಿಸಲಾದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು ಮಸೂದೆ-2025 ರಾಜ್ಯದ ಬಹುಪಾಲು ಜನತೆಯ ಮುಕ್ತ ಅಭಿಪ್ರಾಯಗಳು ಮತ್ತು ಮೂಲ ಆಶಯಗಳಿಗೆ ವಿರುದ್ಧವಾಗಿರುತ್ತದೆ ಎಂದು ಮನವಿಯಲ್ಲಿ ಅವರು ತಿಳಿಸಿದ್ದಾರೆ.

ಈ ಮಸೂದೆ ಜಾರಿಗೆ ಬಂದರೆ ಜನ ಸಾಮಾನ್ಯರು ಮಾತಾನಾಡುವ ಸ್ವಾತಂತ್ರ್ಯವನ್ನು ಕಸಿದು ಕೊಂಡತಾಗುತ್ತದಲ್ಲದೆ, ವ್ಯವಸ್ಥೆಯಲ್ಲಿನ ತಪ್ಪುಗಳನ್ನು ಪ್ರಶ್ನಿಸುವ ವ್ಯಕ್ತಿಯ ಸಂವಿಧಾನಿಕ ಹಕ್ಕನ್ನು ಮೊಟಕುಗೊಳಿಸಲಾಗಿದೆ. ಬಹುಸಂಖ್ಯಾತ ಜನರನ್ನು ಇಂತಹ ಮಸೂದೆಯ ಮೂಲಕ ಕಟ್ಟಿ ಹಾಕುವಂತಹ ಅಸಂಬದ್ದ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳು ಮಸೂದೆ-2025ರನ್ನು ಅಂಗೀಕರಿಸದಂತೆ ಪ್ರಭು ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article