ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯ ನಿವೇಶನ ಜಪ್ತಿಗೆ   ಮುಂದಾದ ನಾಲ್ವರ ವಿರುದ್ಧ ಕೇಸು ದಾಖಲು

ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯ ನಿವೇಶನ ಜಪ್ತಿಗೆ ಮುಂದಾದ ನಾಲ್ವರ ವಿರುದ್ಧ ಕೇಸು ದಾಖಲು

ಬಂಟ್ವಾಳ: ಮನೆಯಲ್ಲಿ ಮಹಿಳೆಯೊಬ್ಬರು ಒಂಟಿಯಾಗಿದ್ದ ವೇಳೆ ಅಧಿಕಾರಿಗಳ ಸೋಗಿನಲ್ಲಿ ಅಕ್ರಮ ಪ್ರವೇಶಗೈದು ಆಕೆಯ ನಿವೇಶನ ಜಪ್ತಿಗೆ ಮುಂದಾಗುವ ಮೂಲಕ ಮಾನಸಿಕ ಕಿರುಕುಳ ನೀಡಿದ ಆರೋಪದಲ್ಲಿ ನಾಲ್ವರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರಿಯಂಗಳ ನಿವಾಸಿ ಪದ್ಮಾವತಿ ಎಂಬವರ ದೂರಿನನ್ವಯ ವಿಜಯ ಪೆರ್ನಾಂಡಿಸ್ ಸಹಿತ ನಾಲ್ವರ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪದ್ಮಾವತಿರವರು ವಾಸದ ಮನೆಯಲ್ಲಿ ಒಂಟಿಯಾಗಿದ್ದಾಗ ನಾಲ್ವರ ಅಪರಿಚಿತರು ಅಧಿಕಾರಿಗಳ ಸೊಗಿನಲ್ಲಿ ಅಕ್ತಮ ಪ್ರವೇಶಗೈದು ಮನೆ ಜಪ್ತಿಮಾಡಲಿದ್ದು,ಹೊರಹೋಗುವಂತೆ ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನು ಆಕ್ಷೇಪಿಸಿದಾಗ ಮನೆ ಮೇಲೆ ಬ್ಯಾಂಕ್ ಸಾಲ ಇದೆ ಎಂದು ಹೇಳಿದ್ದು, ಯಾವ ಬ್ಯಾಂಕ್ ನವರು ಎಂದು ಕೇಳಿದಾಗಲು ಅಪರಿಚಿತರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.

ಈ ನಡುವೆ  ಪೂರ್ವಾನುಮತಿಯಿಲ್ಲದೆ ಏಕಾಏಕಿ ಮನೆಯ ನಿವೇಶನ ಸರ್ವೇ ನಡೆಸಲು ಆರಂಭಿಸಿದಾಗ ಪದ್ಮಾವತಿಯವರು ಗಾಬರಿಯಾಗಿ ಬೊಬ್ಬೆಹಾಕಿದ್ದಾರೆ. ಇವರ ಬೊಬ್ಬೆ ಕೇಳಿ ಸ್ಥಳೀಯರು ಅಲ್ಲಿಗಾಗಮಿಸಿದಾಗ ನಾಲ್ವರು ಅಪರಿಚಿತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಈ ಘಟನೆಯಿಂದ ಜರ್ಜರಿತರಾದ ಪದ್ಮಾವತಿ ಅವರು ಕುಸಿದು ಬಿದ್ದು ಮೂರ್ಚೆ ತಪ್ಪಿದ್ದರು. ಕೂಡಲೇ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಯ ದಾಖಲಿಸಲಾಗಿದೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article