ನಾಯಿ ಮರಿಗಳ ಬಿಟ್ಟು ಹೋದ ದುರುಳರು: ಗ್ರಾಮಸ್ಥರಿಂದ ದೈವದ ಮೊರೆ

ನಾಯಿ ಮರಿಗಳ ಬಿಟ್ಟು ಹೋದ ದುರುಳರು: ಗ್ರಾಮಸ್ಥರಿಂದ ದೈವದ ಮೊರೆ


ಕಡಬ: ಗ್ರಾಮದ ಬಸ್ ನಿಲ್ದಾಣದಲ್ಲಿ ಪುಟ್ಟ ನಾಯಿಮರಿಗಳನ್ನು ಅನಾಥವಾಗಿ ಬಿಟ್ಟು ಹೋದ ದುರುಳರನ್ನು ಶಿಕ್ಷಿಸಲು ಗ್ರಾಮಸ್ಥರು ದೈವದ ಮೊರೆ ಹೋದ ಪ್ರಸಂಗ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಎಡಮಂಗಲ ಗ್ರಾಮದಲ್ಲಿ ನಡೆದಿದೆ.

ಎಡಮಂಗಲ ಗ್ರಾಮದ ನಿಂತಿಕಲ್ ರಸ್ತೆ ಸಮೀಪವಿರುವ ಮಹಾಕಾಳಿ ಬಸ್ ನಿಲ್ದಾಣದಲ್ಲಿ ಈ ಪ್ರಸಂಗ ನಡೆದಿದೆ. ಇನ್ನೂ ಕಣ್ಣು ಬಿಟ್ಟು ಪ್ರಪಂಚ ನೋಡುದ ಪುಟ್ಟ ಎರಡು ನಾಯಿ ಮರಿಗಳನ್ನು ದುರುಳರು ಇಲ್ಲಿ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ. ತಾಯಿಯಿಂದ ದೂರವಾಗಿ ಅನಾಥವಾಗಿರುವ ಈ ಪುಟ್ಟ ಮರಿಗಳು ಬಸ್ ನಿಲ್ದಾಣದ ಮೂಲೆಯಲ್ಲಿ ಕುಳಿತು ಹಸಿವು ಮತ್ತು ತಾಯಿ ಇಲ್ಲದ ರೋದನೆಯಿಂದ ನಡುಗುತ್ತಿದ್ದವು. ಪುಟ್ಟ ಮರಿಗಳ ಚೀರಾಟ ನೋಡಿ ದಾರಿ ಹೋಕರ ಕಣ್ಣು ತೇವವಾಗಿರಿಸಿದ್ದುವು.

ಈ ಘಟನೆಯಿಂದ ನೊಂದ ಗ್ರಾಮಸ್ಥರು ಈ ಕೃತ್ಯ ಎಸಗಿದವರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಪುಟ್ಟ ನಾಯಿಮರಿಗಳನ್ನು ಅನಾಥವಾಗಿ ಬಿಟ್ಟು ಹೋದ ದುರುಳರನ್ನು ಶಿಕ್ಷಿಸಲು ದೈವದ ಮೊರೆ ಹೋಗಿದ್ದಾರೆ.

‘ನಾಯಿ ಮರಿಗಳನ್ನು ತಂದು ಬಿಟ್ಟವರಿಗೆ ಕೊರಗಜ್ಜನಿಗೆ ಮತ್ತು ಕಾನತ್ತೂರಿಗೆ ಹರಕೆ ಹೇಳುತ್ತೇವೆ. ತೆಗೆದುಕೊಂಡಿ ಹೋಗಿ ಇಲ್ಲದಿದ್ದರೆ?’ ಬಸ್ ನಿಲ್ದಾಣದಲ್ಲಿ ದೈವದ ಎಚ್ಚರಿಕೆ ಸಂದೇಶದೊಂದಿಗೆ ಆಳವಡಿಸಿದ್ದ ಬೋರ್ಡ್ ಇದೀಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article