ಕಳವಿಗಾಗಿ ಬಂದಿದ್ದಾತನನ್ನು ಹಿಡಿದು ಠಾಣೆಗೊಪ್ಪಿಸಿದ ಸಾರ್ವಜನಿಕರು: ಅಲ್ಲಿಂದಲೇ ಎಸ್ಕೇಪ್

ಕಳವಿಗಾಗಿ ಬಂದಿದ್ದಾತನನ್ನು ಹಿಡಿದು ಠಾಣೆಗೊಪ್ಪಿಸಿದ ಸಾರ್ವಜನಿಕರು: ಅಲ್ಲಿಂದಲೇ ಎಸ್ಕೇಪ್

ಬಂಟ್ವಾಳ: ಬಿ.ಸಿ.ರೋಡಿನ ಶ್ರೀರಕ್ತೇಶ್ವರೀ ದೇವಸ್ಥಾನದ ಹಿಂಬದಿಯ ರಸ್ತೆಯಲ್ಲಿರುವ ವಸತಿ ಸಂಕೀರ್ಣದಲ್ಲಿರುವ ಮನೆಯೊಂದಕ್ಕೆ ನುಗ್ಗಲು ಯತ್ನಿಸಿದ ಕಳ್ಳನೋರ್ವನನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಬುಧವಾರ ರಾತ್ರಿ ನಡೆದಿದ್ದು, ಈತ ಠಾಣೆಯಿಂದಲು ಎಸ್ಕೇಪ್ ಆಗಿ ಬಳಿಕ ಬಸ್ ತಂಗುದಾಣದಲ್ಲಿ ಪೊಲೀಸರು ವಶಕ್ಕೆ ಪಡೆದು ಮತ್ತೆ ಠಾಣೆಗೆ ಕರೆತಂದಿದ್ದಾರೆ.

ಹಳೇ ವಿನಾಯಕ ಟಾಕೀಸಿನ ಪಕ್ಕದ ಮನೆಯ ಮೂರನೇ ಮಹಡಿಯಲ್ಲಿ ವಾಸವಿರುವ ಕುಟುಂಬ ಮನೆಗೆ ಬೀಗ ಹಾಕಿ ತೆರಳಿದ್ದು, ರಾತ್ರಿ ಸುಮಾರು 7.30 ರ ವೇಳೆಗೆ ಅಪರಿಚಿತ ವ್ಯಕ್ತಿಯೋರ್ವ ಹೆಲ್ಮೆಟ್ ಧರಿಸಿಕೊಂಡು ಈ ವಸತಿ ಸಂಕೀರ್ಣದ ಬಳಿ ಬಂದು ನೇರ ಮೂರನೇ ಮಹಡಿಗೆ ಹತ್ತಿ ಬಾಗಿಲು ಬಡಿದಿದ್ದಾನೆ. ಮನೆಯಲ್ಲಿ ಯಾರು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಮಧ್ಯರಾತ್ರಿ ಮನೆಯಲ್ಲಿ ಕಳವು ಕೃತ್ಯದ ಸಂಚು ನಡೆಸಿ ಅಲ್ಲೇ ಮನೆ ವರಾಂಡದಲ್ಲಿ ಕತ್ತಲೆಯಲ್ಲಿ ಮಲಗಿದ ನಾಟಕವಾಡಿದ್ದಾನೆ.

ಕತ್ತಲಲ್ಲಿ ಅಪರಿಚಿತ ವ್ಯಕ್ತಿ ಸುಳಿದಾಡಿದನ್ನು ಮತ್ತು ಮಹಡಿಯಿಂದ ಸದ್ದು ಕೇಳಿಸಿಕೊಂಡ ಕೆಳಮನೆಯ ಗೃಹಿಣಿ ಕೂಡಲೇ ತನ್ನ ಮಗನಿಗೆ ಮಾಹಿತಿ ನೀಡಿದ್ದಾರೆ.

ಬಿ.ಸಿ.ರೋಡು ಪರಿಸರದಲ್ಲಿದ್ದ ಗೃಹಿಣಿಯ ಮಗ ಸ್ನೇಹಿತರ ಜೊತೆಗಾಗಮಿಸಿ ಮಹಡಿ ಹತ್ತಿದಾಗ ಅಪರಿಚಿತ ವ್ಯಕ್ತಿ ಹೆಲ್ಮೆಟ್ ಧರಿಸಿ ಬಾಗಿಲ ಬಳಿಯಲ್ಲಿ ಮಲಗಿದ್ದಾನೆ. ಅತನನ್ನು ಎಬ್ಬಿಸಿ ಅತನ ತಲೆಯಿಂದ ಹೆಲ್ಮಟ್ ಕಿತ್ತು ವಿಚಾರಿಸಿದಾಗ ಅಸ್ಪಷ್ಟವಾಗಿ ಉತ್ತರಿಸಿದ್ದಾನೆ.

ಎಸ್ಕೇಪ್ ಆದ ಅಪರಿಚಿತ!:

ತಕ್ಷಣ 112 ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿ ಅತನನ್ನು ಒಪ್ಪಿಸಲಾಗಿದೆ. ಅಪರಿಚಿತನನ್ನು ಪೊಲೀಸರು ನಗರ ಠಾಣೆಗೆ ಕರೆದೊಯ್ದು ಜಗಲಿಯಲ್ಲಿ ಕೂರಿಸಿ ಸಬ್ ಇನ್ಸ್‌ಪೆಕ್ಟರ್ ಕೊಠಡಿಯಲ್ಲಿ ಘಟನೆಯ ಬಗ್ಗೆ ಪೊಲೀಸ್ ಸಿಬ್ಬಂದಿಗಳು ವಿವರಣೆ ನೀಡುತ್ತಿದ್ದರೆ. ಇತ್ತ ಅಪರಿಚಿತ ವ್ಯಕ್ತಿ ಠಾಣೆಯಿಂದಲೇ ಎಸ್ಕೇಪ್ ಅಗಿದ್ದಾನೆ.

ತಕ್ಷಣ ಎಚ್ಚೆತ್ತ ಪೊಲೀಸರು ಚಡಪಡಿಸಿಕೊಂಡು ಅಪರಿಚಿತನನ್ನು ಹುಡುಕಾಡಲು ಆರಂಭಿಸಿದಾಗ ಬಿ.ಸಿ.ರೋಡಿನ ಬಸ್ ತಂಗುದಾಣದಲ್ಲಿ ಕುಳಿತಿದ್ದ ಈತನನ್ನು ವಶಕ್ಕೆ ಪಡೆದು ಕರೆತಂದಿದ್ದಾರೆ.

ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಕಳೆದ ಹಲವು ಸಮಯದಿಂದ ಕಳವು ಪ್ರಕರಣಗಳು ದಾಖಲಾಗುತ್ತಲೆ ಇದೆ. ಕಳ್ಳರು ಇಲ್ಲಿ ಸಕ್ರಿಯರಾಗುತ್ತಿರುವ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ನಡುವೆ ಸಾರ್ವಜನಿಕರು ಹಿಡಿದು ಕೊಟ್ಟ ಅಪರಿಚಿತನನ್ನು ವಿಚಾರಣೆಗೊಳಪಡಿಸುವ ಬದಲು ಠಾಣೆಯ ಹೊರಗಡೆ ಜಗಲಿಯಲ್ಲಿ ಕುಳ್ಳಿರಿಸಲಾಗಿದ್ದು, ಅತ ಠಾಣೆಯಿಂದಲೇ ಎಸ್ಕೇಪ್ ಆಗುತ್ತಿದ್ದಾನಂದರೆ ಬಂಟ್ವಾಳ ನಗರ ಠಾಣೆಯ ಪೊಲೀಸ್ ಸಿಬ್ಬಂದಿಗಳ ಕಾರ್ಯವೈಖರಿ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article