ದೇವಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾಕಬಾರದೆಂದು ಹೇಳಿಲ್ಲ: ರೈ ಸ್ಪಷ್ಟನೆ

ದೇವಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾಕಬಾರದೆಂದು ಹೇಳಿಲ್ಲ: ರೈ ಸ್ಪಷ್ಟನೆ

ಬಂಟ್ವಾಳ: ಸರಕಾರಿ ನೌಕರರು ಅದರಲ್ಲೂ ಹಿರಿಯ ಅಧಿಕಾರಿಯಾಗಿರುವಂತ ಜಿಲ್ಲಾಧಿಕಾರಿಗಳು ಯಾವುದೇ ಧರ್ಮಕ್ಕೆ ಸೀಮಿತವಾದ ಧ್ವಜವನ್ನು ಹಾರಿಸುವುದು ಸರಿಯಲ್ಲ ಎಂದು ಹೇಳಿರುತ್ತೇನೆ ಹೊರತು ದೇವಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾಕಬಾರದೆಂದು ತಾನು ಹೇಳಿರುವುದಿಲ್ಲ ಎಂದು ಮಾಜಿ ಸಚಿವ ರಮಾನಾಥ ರೈ ಅವರು ಪ್ರಕಟಣೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿಗಳು ದೇವಸ್ಥಾನದ ಕಾರ್ಯಕ್ರಮದಲ್ಲಿ ಕೇಸರಿ ಧ್ವಜವನ್ನು ಹಾರಿಸಿದ್ದಕ್ಕೆ ಉಡುಪಿಯಲ್ಲಿ ಕೆಲವರಿಂದ ಟೀಕೆಗಳು ಬಂತು ಅದರ ಮುಂದುವರಿದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಯದವರು ಕೇಸರಿ ಧ್ವಜವನ್ನು ಮತ್ತು ಇತರೆ ಯಾವುದೇ ಧರ್ಮದ ಧ್ವಜವನ್ನು ಹಾರಿಸಬಾರದು ಎಂದು ಹೇಳಿದ್ದೇ, ಆದರೆ ಮಾಧ್ಯಮದಲ್ಲಿ ನಾನು ದೇವಸ್ಥಾನದಲ್ಲಿ ಕೇಸರಿ ಧ್ವಜವನ್ನು ಹಾಕಬಾರದೆಂದು ಹೇಳಿದೆ ಎಂದು ಬಿಂಬಿಸಲಾಗಿದೆ. ಇದೀಗ ನನ್ನ ಹೇಳಿಕೆಯನ್ನು ಅಪಪ್ರಚಾರ ಮಾಡಲಾಗುತ್ತಿದ್ದು ನಾನು ಹೇಳಿರುವುದು ಒಂದು ನಿರ್ದಿಷ್ಟ ವಿಷಯದ ಬಗ್ಗೆಯಾಗಿದೆ ಎಂದು ಸ್ಪಷ್ಟನೆಯನ್ನು ಅವರು ನೀಡಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article