ಸಾಹಿತ್ಯ ಜನಮನವನ್ನು ತಲುಪಬೇಕು: ಡಾ. ಹರಿಕೃಷ್ಣ ಪುನರೂರು

ಸಾಹಿತ್ಯ ಜನಮನವನ್ನು ತಲುಪಬೇಕು: ಡಾ. ಹರಿಕೃಷ್ಣ ಪುನರೂರು


ಬಂಟ್ವಾಳ: ಸಾಹಿತ್ಯ ಜನಮನವನ್ನು ತಲುಪಬೇಕು. ಪುಸ್ತಕ ಓದುವ ಪ್ರವೃತ್ತಿ ಬೆಳಯಬೇಕು. ಪುಸ್ತಕಗಳನ್ನು ಪ್ರಕಟಣೆಗೆ ಸಹಕಾರ ನೀಡುವ ಮೂಲಕ ಬರೆಯುವವರಿಗೆ ಪ್ರೋತ್ಸಾಹ ನೀಡಬೇಕು ಎಂದು ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.

ಕಥಾಬಿಂದು ಪ್ರಕಾಶನ ಮಂಗಳೂರು, ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ನೇತ್ರಾವತಿ ಸಂಗಮ ಜೋಡುಮಾರ್ಗ ಮತ್ತು ಕ.ಚು.ಸಾ.ಪ. ದ.ಕ. ಬಂಟ್ವಾಳ ತಾಲೂಕು ಸಮಿತಿ ಅಶ್ರಯದಲ್ಲಿ ಪಾಣೆಮಂಗಳೂರಿನ ಶ್ರೀ ಭಯಂಕೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಭಾನುವಾರ ನಡೆದ ಕಥಾಬಿಂದು ಸಾಹಿತ್ಯ ಸಂಭ್ರಮ-2026 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಸೀನಿಯರ್ ಛೇಂಬರ್ ಅಧ್ಯಕ್ಷ ತೇವು ತಾರನಾಥ ಕೊಟ್ಟಾರಿ ಮಾತನಾಡಿ ಸಾಹಿತ್ಯದ ಮೂಲಕ ಸಜ್ಜನರ ಸಂಘಟನೆಯಾಗುತ್ತದೆ. ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಸಾಹಿತ್ಯ ಹೆಚ್ಚುಹೆಚ್ಚು ಪ್ರಕಟವಾಗಬೇಕು ಎಂದರು.

ಹಿರಿಯ ಸಾಹಿತಿ ಡಾ. ಕೊಳ್ಚಪ್ಪೆ ಗೋವಿಂದ ಭಟ್, ಕ.ಚು.ಸಾ.ಪ ಬಂಟ್ವಾಳ ತಾಲೂಕು ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಕವಯಿತ್ರಿ ಡಾ. ಶಾಂತ ಪುತ್ತೂರು ಸಮ್ಮೇಳನಕ್ಕೆ ಶುಭ ಹಾರೈಸಿ ಮಾತನಾಡಿದರು.

ರಾಜ್ಯ ಮಟ್ಟದ ಕವಿಗೋಷ್ಠಿ:

ಹಿರಿಯ ಸಾಹಿತಿ ಜಯಾನಂದ ಪೆರಾಜೆ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಹಾ.ಮ. ಸತೀಶ್ ಬೆಂಗಳೂರು, ಶಾರದಾ ಮೊಳೆಯಾರ್, ಪ್ಲಾವಿಯಾ ಅಲ್ಬುಕರ್ಕ್ ಪುತ್ತೂರು, ಗೀತಾ ಕೊಂಕೋಡಿ, ಸೌಮ್ಯ ಆರ್. ಶೆಟ್ಟಿ, ರೋಹಿಣಿ ಆಚಾರ್ಯ ಪುತ್ತೂರು, ಮಲ್ಲಿಕಾಜೂನ ಕೆರೊಡಿ, ಸವಿತಾ ಕರ್ಕೆರ ಕಾವೂರು, ಸುರೇಶ ಎಮ್. ಹರಿಜನ, ಅಶ್ವಿಜ ಶ್ರೀಧರ, ಮಮತ ಡಿ.ಕೆ. ಸುರೇಶ್ ಕುಮಾರ್ ಚಾರ್ವಕ, ಜಯರಾಮ ಪಡ್ರೆ, ಶಿಲ್ಪ ಎನ್., ವಿಂದ್ಯಾ ಕುದ್ಪಾಜೆ, ಶ್ವೇತಾ ಡಿ ಬಡಗಬೆಳ್ಳೂರು, ರಮೇಶ್ ಮೆಲ್ಕಾರ್, ರಜನಿ ಚಿಕ್ಕಯ್ಯಮಠ ಮೊದಲಾದವರು ಸ್ವರಚಿತ ಕವನ ವಾಚಿಸಿದರು.

ಕನ್ನಡ ರತ್ನ ರಾಜ್ಯ ಪ್ರಶಸ್ತಿ:

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಪತ್ರಕರ್ತೆ ವಾಣಿ ರಘುನಾಥ್ ಮುಂಬೈ, ಡಾ. ಜೋಸೆಫ್ ಲೋಬೋ, ಯಾದವ ಹರೀಶ್, ರಕ್ತದಾನಿ ಮಂಜು ಮೈಸೂರು, ಪೂರ್ಣಿಮಾ ಗುರುಮೂರ್ತಿ, ಅನಿಲ್ ಮೆಂಡೋನ್ಸಾ, ಮಂಜುನಾಥ ಕೆ. ಮೈಸೂರು, ಲಯನ್ ಕುಮಾರ್, ಕುಮಾರಿ ಅರ್ನಾ ಎಸ್. ಭಟ್ ಇವರನ್ನು ಕನ್ನಡ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಕೃತಿಗಳ ಬಿಡುಗಡೆ:

ಎ.ಪಿ. ಉಮಾಶಂಕರಿ ಮರಿಕೆ ಅವರ ಬಾಂಧವ್ಯದ ನೆಲೆ ಹಾಗೂ ತಿರುವುಗಳು, ಪಂಕಜಾ ರಾಮ ಭಟ್ ಮುಡಿಪುರವರ ಮಾನಸ ವೀಣೆ, ಪುಷ್ಪ ಪ್ರಸಾದರ ದಿವ್ಯಾಕ್ಷರಿ, ನೀಮಾ ಲೋಬೋ ಅವರ ಕನಸ್ಸೇ ಥ್ಯಾಂಕ್ಯೂ, ಡಾ. ಕೊಳ್ಚಪ್ಪೆ ಗೋವಿಂದ ಭಟ್ಟರ ಸಂಪಾದಕತ್ವದ ಕಥಾ ತೋರಣ ಕೃತಿಗಳನ್ನು ಹರಿಕೃಷ್ಣ ಪುನರೂರು ಲೋಕಾರ್ಪಣೆ ಮಾಡಿದರು.

ಕಥಾ ಬಿಂದು ಪ್ರಕಾಶನದ ಪಿ.ವಿ. ಪ್ರದೀಪ್ ಕುಮಾರ್ ಸ್ವಾಗಿತಿಸಿ, ಪ್ರಸ್ತಾವನೆಗೈದು ಲೇಖಕರಿಗೆ ಅಭಿನಂದನೆ ಸಲ್ಲಿಸಿದರು. ಶೋಭ ದಿನೇಶ್ ಉದ್ಯಾವರ, ಗೀತಾ ಕೊಂಕೋಡಿ ನಿರೂಪಿಸಿದರು. ಡಾ. ವಾಣಿಶ್ರೀ ಕಾಸರಗೋಡು ಸಾರಥ್ಯದಲ್ಲಿ ಸಾಹಿತ್ಯ ಗಾನ ನೃತ್ಯ ವೈಭವ ತಂಡ ಮತ್ತು ಸುಭಾಷಿಣಿ ಬೇಕೂರು ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಿಕ್ಷಕಿ ರೇಖಾ ರಾವ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article