ಕಾಲು ಸಂಕ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಗುದ್ದಲಿ ಪೂಜೆ
Friday, January 9, 2026
ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಇಡ್ಯಾ ಪೂರ್ವ 6ನೇ ವಾರ್ಡಿನ ಕಟ್ಲ ವಿಶ್ವನಾಥ್ ಶೆಟ್ಟಿ ಮನೆಯ ಬಳಿ 25 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಲುಸಂಕದ ಗುದ್ದಲಿ ಪೂಜೆಯನ್ನು ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ನೆರವೇರಿಸಿದರು.
ನಿಕಟ ಪೂರ್ವ ಮನಪಾ ಸದಸ್ಯೆ ಸರಿತಾ ಶಶಿಧರ್, ಮಹಾ ಶಕ್ತಿಕೇಂದ್ರ ಅಧ್ಯಕ್ಷ ದಿನಕರ್ ಇಡ್ಯಾ, ವಾರ್ಡ್ ಅಧ್ಯಕ್ಷ ಶಶಿಧರ್ ಕಟ್ಲ, ಮಾಜಿ ಮನಪಾ ಸದಸ್ಯ ಗುಣಶೇಖರ್ ಶೆಟ್ಟಿ, ಬೂತ್ ಅಧ್ಯಕ್ಷ ಸುಜಾತಾ, ಮಂಡಲ ಕಾರ್ಯದರ್ಶಿ ಪುಷ್ಪರಾಜ್ ಮುಕ್ಕ, ರಾಜ್ಯ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ವೇತಾ ಪೂಜಾರಿ, ಸುರತ್ಕಲ್ ವ್ಯವಸಾಯ ಸಹಕಾರಿ ಸಂಘ ಅಧ್ಯಕ್ಷ ಅಶೋಕ್ ಶೆಟ್ಟಿ, ಬಿಜೆಪಿ ಪ್ರಮುಖರಾದ ರಾಘವೇಂದ್ರ ಶೆಣೈ, ಪ್ರಶಾಂತ್ ಆಚಾರ್ಯ, ಸಂದೇಶ್ ಇಡ್ಯಾ ಉದಯ ಆಳ್ವ, ಪಕ್ಷದ ಹಿರಿಯರು ವಿಶ್ವನಾಥ್ ಶೆಟ್ಟಿ, ಸ್ಥಳೀಯರಾದ ಚರಣ್, ಹರೀಶ್ ಯೋಗೀಶ್, ವಿಲ್ಷನ್, ಸುಜಾತ, ನೀಲಮ್ಮ ಮತ್ತಿತರರು ಉಪಸ್ಥಿತರಿದ್ದರು.