ಅಕ್ರಮ ಜಾನುವಾರ ಸಾಗಾಟ ಪತ್ತೆ: ಗೋವುಗಳನ್ನು ರಸ್ತೆಗಿಳಿಸಿ ಪಿಕಪ್ ಸಹಿತ ಆರೋಪಿಗಳಿಬ್ಬರು ಪರಾರಿ
Friday, January 9, 2026
ಬಂಟ್ವಾಳ: ಪಿಕಪ್ ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಮಾಡುತ್ತಿದ್ದ ಆರೋಪದಲ್ಲಿ ಇಬ್ಬರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದಕಟ್ಟೆಯ ಕಿನಾಜ್ಜೆ ನಿವಾಸಿಗಳಾದ ರಾಘವೇಂದ್ರ ನಾಯ್ಕ ಮತ್ತು ಯೋಗೀನಾಥ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.
ಆರೋಪಿಗಳು ಪಿಕಪ್ ವಾಹನದಲ್ಲಿ 3 ಗಂಡು ಕರು ಹಾಗೂ 1 ಹಸುವನ್ನು ಕರ್ಪೆದೋಟ-ನೆಕ್ಲಾಜೆ-ಕುಪ್ಪೆಪದವು ಮಾರ್ಗವಾಗಿ ಮಂಗಳೂರು ಕಡೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಖಚಿತ ಮಾಹಿತಿಯನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತಲುಪುವುದಕ್ಕೆ ಮುನ್ನವೇ ಜಾನುವಾರುಗಳನ್ನು ಪಿಕಪ್ ವಾಹನದಿಂದ ಕೆಳಗೆ ಇಳಿಸಿ ವಾಹನ ಸಹಿತ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ತಕ್ಷಣ ಪಿಕಪನ್ನು ಹಿಂಬಾಲಿಸಿಕೊಂಡು ಹೋದರೂ ಆರೋಪಿಗಳ ಸಹಿತ ವಾಹನದ ಸುಳಿವು ಪತ್ತೆಯಾಗಿಲ್ಲ ಎನ್ನಲಾಗಿದೆ.
ಈ ಬಗ್ಗೆ ಆರೋಪಿಗಳ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.