ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ವರ್ಷಾವಧಿ ನೇಮೋತ್ಸವ
Saturday, January 24, 2026
ಕಿನ್ನಿಗೋಳಿ: ಮೂಲ್ಕಿ ಕೊಲ್ಲೂರಿನ ಕಾಂತಾಬಾರೆ ಬೂದಾಬಾರೆ ಜನ್ಮಕ್ಷೇತ್ರದಲ್ಲಿ ವರ್ಷಾವಧಿ ನೇಮೋತ್ಸವದಂಗವಾಗಿ ಶ್ರೀ ಕಾಂತಾಬಾರೆ ಬೂದಾಬಾರೆಯರಿಗೆ ಅನ್ನ ನೈವೇದ್ಯ ಸೇವೆ, ಶ್ರೀ ನಾಗದೇವರ ಸನ್ನಿಧಿಯಲ್ಲಿ ನಾಗತಂಬಿಲ ಪೂರ್ವಕ ಪ್ರಸನ್ನ ಪೂಜೆ, ಸಾಮೂಹಿಕ ಆಶ್ಲೇಷಾ ಬಲಿ ಸೇವೆ ನಡೆದು ಜಾರಂದಾಯ, ಗುಡ್ಡೆ ಧೂಮಾವತಿ, ಸರಳ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ನಡೆಯಿತು.
ಸಮಿತಿಯ ದೇವೇಂದ್ರ ಪೂಜಾರಿ, ಗಂಗಾಧರ ಪೂಜಾರಿ, ದಾಮೋದರ ದಂಡಕೇರಿ, ದಯೇಶ್ ಪೂಜಾರಿ, ಸುರೇಶ್ ಎಸ್., ಹರಿಂದ್ರ ಸುವರ್ಣ ವಿನೋದರ ಪೂಜಾರಿ ಶೀನ ಡಿ. ಪೂಜಾರಿ ಮತ್ತಿತರರಿದ್ದರು.