ಬಿ.ಕೆ. ಹರಿಪ್ರಸಾದ್ ನಿಲುವಿಗೆ ಸರ್ವ ಕರ್ನಾಟಕದ ಜನತೆಯ ಬೆಂಬಲವಿದೆ
Saturday, January 24, 2026
ಮಂಗಳೂರು: ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ತನ್ನ ಭಾಷಣವನ್ನು ಮೊಟಕು ಗೊಳಿಸಿದ ಬಗ್ಗೆ ಮತ್ತು ರಾಷ್ಟ್ರ ಗೀತೆಗೆ ರಾಜ್ಯಪಾಲರ ನಿಲುವು, ನಡೆಯನ್ನು ಆಕ್ಷೇಪಿಸಿದ ಬಿ.ಕೆ. ಹರಿಪ್ರಸಾದ್ ಅವರ ನಿಲುವಿಗೆ ಇಂದು ಸರ್ವ ಕರ್ನಾಟಕದ ಜನತೆ ಬೆಂಬಲಕ್ಕೆ ನಿಲ್ಲುತ್ತದೆ.
ಬಿ.ಕೆ. ಹರಿಪ್ರಸಾದ್ ಓರ್ವ ಜಾತ್ಯತೀತ ನಿಲುವಿನ ಸಂವಿಧಾನಾಭಿಮಾನಿ, ಅವರ ವಿಧಾನ ಮಂಡಲದ ಶಿಷ್ಟಾಚಾರದ ಬೇಡಿಕೆ ನ್ಯಾಯಯುತ, ಬಿ.ಕೆ. ಹರಿಪ್ರಸಾದ್ ಅವರ ನಿಲುವು ಕೂಡಾ ಸಂವಿಧಾನಾತ್ಮಕ. ಅವರ ನಿಲುವಿಗೆ ಆರು ಕೋಟಿ ಕರ್ನಾಟಕ ಜನತೆಯ ಸಂಪೂರ್ಣ ಬೆಂಬಲ ಇದೆ ಎಂದು ಮಾಜಿ ಮೇಯರ್, ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.