ಫೆ.14 ಮತ್ತು 15 ರಂದು 16ನೇ ವರ್ಷದ ಜಯ-ವಿಜಯ ಜೋಡುಕೆರೆ ಕಂಬಳ
ಮಂಗಳೂರು: ಜಯ-ವಿಜಯ ಜೋಡುಕೆರೆ ಕಂಬಳ ಸಮಿತಿ ಜಪ್ಪಿನಮೊಗರು ಇದರ ನೇತೃತ್ವದಲ್ಲಿ ಮನ್ಕುತೋಟಗುತ್ತು ಮತ್ತು ನಾಡಾಜೆಗುತ್ತು ಜೆ. ಜಯಗಂಗಧರ ಶೆಟ್ಟಿ ಅವರ ಸ್ಮರಣಾರ್ಥ 16ನೇ ವರ್ಷದ ಹೊನಲು ಬೆಳಕಿನ ಜಯ-ವಿಜಯ ಜೋಡುಕೆರೆ ಕಂಬಳವು ಜಪ್ಪಿನಮೊಹರು ನೇತ್ರವತಿ ನದಿ ತೀರದಲ್ಲಿ ಫೆ.14 ಮತ್ತು 15 ರಂದು ನಡೆಯಲಿದೆ ಎಂದು ಶಾಸಕ, ಕಂಬಳ ಸಮಿತಿಯ ಗೌರವಾಧ್ಯಕ್ಷ ವೇದವ್ಯಾಸ ಕಾಮತ್ ತಿಳಿಸಿದರು.
ಅವರು ಇಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಫೆ.೧೪ ರಂದು ಬೆಳಗ್ಗೆ 8.30ಕ್ಕೆ ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಅವರ ಅಧ್ಯಕ್ಷತೆಯಲ್ಲಿ ಅನಂತಪದ್ಮನಾಭ ಅಸ್ರಣ್ಣ ಅವರು ಆಶೀರ್ವಚನ ನೀಡಲಿದ್ದು, ವೇ.ಮೂ. ವಿಠಲದಾಸ್ ತಂತ್ರಿ ಕಂಬಳವನ್ನು ಉದ್ಘಾಟಿಸಲಿದ್ದಾರೆ ಎಂದರು.
ಸಂಜೆ 7 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರ ಅಧ್ಯಕ್ಷತೆಯಲ್ಲಿ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಡಾ. ಎ. ಸದಾನಂದ ಶೆಟ್ಟಿ, ಅದಾನಿ ಗ್ರೂಪ್‌ನ ಅಧ್ಯಕ್ಷ ಕಿಶೋರ್ ಆಳ್ವ, ನಾಡಾಜೆಗುತ್ತು ಡಾ. ಕೆ. ಪ್ರಕಾಶ್ ಶೆಟ್ಟಿ, ಉಮವತಿ ಶೆಟ್ಟಿ, ಜನಪ್ರತಿನಿಧಿಗಳು, ಉದ್ಯಮಿಗಳು, ಸಿನಿಮಾ ತಾರೆಯರು ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುವುದು ಎಂದ ಅವರು, ಕಳೆದ ವರ್ಷ 150 ಜೋಡಿ ಕೋಣಗಳು ಕಂಬಳದಲ್ಲಿ ಭಾಗವಹಿಸಿದ್ದು, ಈ ವರ್ಷ ಅದಕ್ಕಿಂತ ಹೆಚ್ಚು ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಬಾರಿ ಕನಹಲಗೆ, ಹಗ್ಗ ವಿಭಾಗ, ನೇಗಿಲು ವಿಭಾಗ ಹಾಗೂ ಅಡ್ಡ ಹಲಗೆ ವಿಭಾಗಗಲ್ಲಿ ಸ್ಪರ್ಧೆ ನಡೆಯಲಿದೆ. ವಿಜೇತ ಕೋಣಗಳಿಗೆ ಚಿನ್ನದ ಪದಕದೊಂದಿಗೆ ಶಾಶ್ವತ ಫಲಕ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಸಮಿತಿಯ ಅಧ್ಯಕ್ಷ ಅನಿಲ್ ಶೆಟ್ಟಿ ಮನ್ಕುತೋಟಗುತ್ತು, ಕಾರ್ಯಾಧ್ಯಕ್ಷರುಗಳದ ವೀಣಾಮಂಗಳ, ಪ್ರವೀಣ್‌ಚಂದ್ರ ಆಳ್ವ, ಶಕೀನ್ ಶೆಟ್ಟಿ, ಸಂದೀಪ್ ಶೆಟ್ಟಿ ಎಕ್ಕೂರು, ನಿಶಾನ್ ಪೂಜಾರಿ, ಸಂತೋಷ್ ಆಳ್ವ, ರಜಾನಂದ ರೈ ಕೊಪ್ಪರಿಗೆಗುತ್ತು,, ಪ್ರಮುಖರಾದ ಉಮೇಶ್ ಅತಿಕಾರಿ, ಬಾಲಕೃಷ್ಣ ಶೆಟ್ಟಿ, ಚಿತ್ತರಂಜನ್ ಬೋಳಾರ್, ರಾಕೇಶ್, ರೈ. ಎಸ್.ಎನ್., ಗಣೇಶ್ ಶೆಟ್ಟಿ, ಎಆಜೇಶ್ ಶೆಟ್ಟಿ, ಜೆ. ನಾಗೇಂದ್ರ ಕುಮಾರ್, ಸಾಯುದ್ದೀನ್ ಬೆಸ್ಟಡೀಲ್, ಸುರೇಶ್ ಶೆಟ್ಟಿ ಕೊಳಂಬೆ, ಶೈಲೇಶ್ ಭಂಡಾರಿ, ಸುರೇಶ್ ಹಳೆಮನೆ, ಭಸ್ಕರಚಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಫ್ಲಕ್ಸ್ ಝೋನ್ ಗುರುತಿಸಲು ಆಗ್ರಹ:
ಎಲ್ಲೆಂದರಲ್ಲಿ ಫ್ಲಕ್‌ಗಳನ್ನು ಅಳವಡಿಸಲು ಸಧ್ಯವಿಲ್ಲ. ಆದುದರಿಂದಲೇ ಈಗಗಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದು, ನಗರದ 20-30 ಕಡೆಗಳಲ್ಲಿ ಅನುಮತಿ ಪಡೆದು ಫ್ಲಕ್ಸ್ ಅಳವಡಿಸಲು ಫ್ಲಕ್ಸ್ ಝೋನ್ ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದರು.