ಹಿರಿಯ ಮೀನು ಮಾರಾಟಗಾರ್ತಿ ನಾಗು ಅಜ್ಜಿ ನಿಧನ
Tuesday, January 6, 2026
ಕುಂದಾಪುರ: ಮಧುವನ ಸಮೀಪ ಪಡುಮಾನಂಬಳ್ಳಿ ನಿವಾಸಿ, ಮಲ್ಪೆ ಬಂದರಿನ ಅತ್ಯಂತ ಹಿರಿಯ ಹಸಿ ಮೀನು ಮಾರಾಟಗಾರ ಮಹಿಳೆ ನಾಗು ಮರಕಾಲ್ತಿ ಯಾನೆ ನಾಗಜ್ಜಿ ( 95) ಜ.6 ರಂದು ಅಸೌಖ್ಯದಿಂದ ನಿಧನ ಹೊಂದಿದರು.
ಮೃತರು ಮೂವರು ಪುತ್ರರನ್ನು ಅಗಲಿದ್ದಾರೆ.
ತನ್ನ 15ನೇ ವಯಸ್ಸಿಗೆ ಮೀನು ಮಾರಾಟ ಆರಂಭಿಸಿದ ಇವರು 90 ವರ್ಷದ ತನಕ ಸುಮಾರು 75ವರ್ಷ ಮಧುವನದಲ್ಲಿ ಮೀನು ಮಾರಟ ನಡೆಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಧಾರ್ಮಿಕ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಇವರು ದೇಗುಲಗಳ ನಿರ್ಮಾಣ, ಧಾರ್ಮಿಕ ಕಾರ್ಯಕ್ರಮಗಳಿಗೆ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ. ಮಲ್ಪೆ ಬಂದರಿನಲ್ಲಿ 75 ವರ್ಷ ಹಸಿ ಮೀನು ಮಾರಾಟ ನಡೆಸಿದ ನೆಲೆಯಲ್ಲಿ ಡಾ.ಜಿ.ಶಂಕರ್ ಅವರು ತಮ್ಮ ಟ್ರಸ್ಟ್ ವತಿಯಿಂದ ಅಜ್ಜಿಯನ್ನ ಗೌರವಿಸಿದ್ದರು.