ಜ.23ರಂದು ‘ಕಲ್ಟ್’ ಬಿಡುಗಡೆ

ಜ.23ರಂದು ‘ಕಲ್ಟ್’ ಬಿಡುಗಡೆ

ಮಂಗಳೂರು: ‘ಕಲ್ಟ್‘ ಸಿನೆಮಾ ಜ.23ರಂದು ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ ಎಂದು ಚಿತ್ರದ ನಾಯಕ ನಟ, ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ತಿಳಿಸಿದ್ದಾರೆ.

ಶನಿವಾರದಂದು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿನೆಮಾ ರೊಮ್ಯಂಟಿಕ್ ಆಗಿದೆ. ಜತೆಗೆ ಉತ್ತಮ ಸಂದೇಶವನ್ನು ಹೊಂದಿದೆ. ಇಂದಿನ ಯುವಜನತೆಗೆ ಪ್ರೀತಿ, ಮೋಸದ ಬಗ್ಗೆ ಹಾಗೂ ಅವರ ಹೆತ್ತವರಿಗೆ ತಮ್ಮ ಮಕ್ಕಳ ಮೇಲಿನ ಜವಾಬ್ದಾರಿಯ ಬಗ್ಗೆ ಸಂದೇಶ ನೀಡಲಿದೆ. ನಾಯಕ ‘ಮಾಧವ‘ ಮೂರು ರೂಪಗಳಲ್ಲಿ ಕಾಣಿಸಿಕೊಳ್ಳಲಿದ್ದು ಭಾವನಾತ್ಮಕ ಕತೆಯನ್ನು ಹೊಂದಿದೆ. ಅನಿಲ್ ಕುಮಾರ್ ಅವರು ನಿರ್ದೇಶಿಸಿರುವ ಈ ಸಿನೆಮಾವನ್ನು ಲೋಕಿ ಅವರು ನಿರ್ಮಿಸಿದ್ದಾರೆ. ರಚಿತಾರಾಮ್ ಮತ್ತು ಮಲೈಕಾ ಟಿ.ವಸುಪಾಲ್ ಅವರು ನಾಯಕಿಯರಾಗಿ ಅಭೀನಯಿಸಿದ್ದಾರೆ. ಉಡುಪಿ, ಕಾಸರಗೋಡು, ಮೈಸೂರು, ಹಂಪಿ ಸೇರಿದಂತೆ ರಾಜ್ಯದಲ್ಲಿಯೇ ಚಿತ್ರೀಕರಣ ನಡೆಸಲಾಗಿದೆ ಎಂದು ತಿಳಿಸಿದರು.

ಚಿತ್ರದ ನಾಯಕಿ ಮಲೈಕಾ ಟಿ.ವಸುಪಾಲ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article