ನಿಟ್ಟೆ ವಿನಯ್ ಹೆಗ್ಡೆಗೆ ಲೆಮಿನಾ ಸಂಸ್ಥೆಯಲ್ಲಿ ಶ್ರದ್ಧಾಂಜಲಿ
ಲೆಮಿನಾ ಸಂಸ್ಥೆಯ ನಿರ್ದೇಶಕ ಬಿ.ಎಸ್. ಬಾಳಿಗಾ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇದ್ದ ತನ್ನನ್ನು ವಿನಯ ಹೆಗ್ಡೆ ಅವರು ಲೆಮಿನಾ ಸಂಸ್ಥೆಗೆ ಬರಮಾಡಿಸಿ ಇಂದು ಸುಮಾರು ನಲವತ್ತೇಳು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ತನಗೆ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಮಾರ್ಗದರ್ಶನ ನೀಡಿದ ವಿನಯ ಹೆಗ್ಡೆಯವರು ಕಾರ್ಮಿಕ ಸಿಬ್ಬಂದಿಗಳ ಕುಟುಂಬದ ಏಳಿಗೆಗೆ ಅಪಾರವಾಗಿ ಶ್ರಮಿಸಿದ ಧೀಮಂತ, ಶ್ರೇಷ್ಠ ವ್ಯಕ್ತಿತ್ವ ಅವರದು ಎಂದರು.
ಲೆಮಿನಾ ಸಂಸ್ಥೆಯ ಕಾರ್ಮಿಕ ಸಿಬ್ಬಂದಿಗಳ ಪ್ರತಿನಿಧಿ ರವೀಂದ್ರ ಟಿ. ಅವರು ನುಡಿನಮನ ಸಲ್ಲಿಸಿ, ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅಪಾರವಾದ ಕಳಕಳಿ ತೋರಿಸಿ, ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಪರಿಹಾರ, ಸಲಹೆ ಮಾರ್ಗದರ್ಶನ ನೀಡುತ್ತಾ ಕಾರ್ಮಿಕ ಸಿಬ್ಬಂದಿ ಬಂಧುಗಳನ್ನು ತನ್ನ ಕುಟುಂಬ ಎಂದು ನಂಬಿದ ಮಹಾನ್ ಚೇತನ ವಿನಯ ಹೆಗ್ಡೆಯವರು ಎಂದು ಹೇಳಿದರು.
ವಿನಯ ಹೆಗ್ಡೆಯವರ ಪುತ್ರ ಹಾಗೂ ನಿರ್ದೇಶಕ ವಿಶಾಲ್ ಹೆಗ್ಡೆ, ಮೊಮ್ಮಗ ವಿರೇನ್ ಹೆಗ್ಡೆ, ಕುಟುಂಬ ಸದಸ್ಯರು, ನಿರ್ದೇಶಕ ಅವಿನಾಶ್ ಶೆಣೈ, ಸಿಇಒ ರೋಶನ್ ಪಿಂಟೋ, ಲೆಮಿನಾ ಸಂಸ್ಥೆಯ ಅಧಿಕಾರಿಗಳಾದ ಅಜಿತ್ ಆಳ್ವ, ಚಂದ್ರಶೇಖರ ಸಾಲಿಯಾನ್, ಸುಧಾಕರ ಶೆಟ್ಟಿ, ಶ್ರೀಧರ ಮೆಲಾಂಟ, ಸಪ್ನಾ ಕೆ, ಬಿ.ಆರ್. ಬಾಳಿಗಾ, ಎ.ಆರ್. ಭಾಂಡಗೆ, ಸದಾನಂದ ಸಾಲಿಯಾನ್, ಮೋಹನ್ ಹೆಗ್ಡೆ, ಎಲೋಶಿಯಸ್ ಸಿಕ್ವೆರ, ವಿಟ್ಠಲ್ ಭಟ್, ರವಿ ಶೆಟ್ಟಿ, ಶಾಂತೇರಿ ಬಾಳಿಗಾ, ರಮೇಶ್ ಶೆಟ್ಟಿ, ವಿಶುಕುಮಾರ್, ಪ್ರಕಾಶ್ ಕುಡ್ವ, ಕೃಷ್ಣ ಅಂಚನ್, ಪುನೀತ್ ಭಟ್ ಹಾಗೂ ನೂರಾರು ಕಾರ್ಮಿಕರು ಮತ್ತು ಸಿಬ್ಬಂದಿಗಳು ವಿನಯ ಹೆಗ್ಡೆ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
