ಜ.26 ರಂದು ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವ-2027ರ ಸಮಾಲೋಚನಾ ಸಭೆ
ಕಾರ್ಕಳದಲ್ಲಿ ಸುಮಾರು 200 ವರ್ಷಗಳ ಹಿಂದೆ ನಿರ್ಮಿಸಿ , ಪ್ರತಿಷ್ಠಾಪಿಸಿದ ಶ್ರೀ ಬಾಹುಬಲಿ ಚರಿತ್ರೆ ಒಂದು ಐತಿಹಾಸಿಕ ಅಧ್ಯಾಯ. ಮಾತ್ರವಲ್ಲ ಹದಿನೆಂಟು ಪ್ರಾಚೀನ ಜಿನ ಮಂದಿರಗಳಿಂದಾಗಿ "ಜೈನಕಾಶಿ" ಎಂದೇ ವಿಶ್ವ ವಿಖ್ಯಾತವಾದ ಕಾರ್ಕಳದಲ್ಲಿ ಬಾಹುಬಲಿ ಸ್ವಾಮಿಗೆ 12 ವರ್ಷಗಳಿಗೊಮ್ಮೆ ಮಹಾಮಸ್ತಾಕಾಭಿಷೇಕ ನಡೆಯುತ್ತಿದ್ದು, ಈ ಹಿಂದೆ 1990, 2002, 2015ರಲ್ಲಿ ವೈಭವದೊಂದಿಗೆ ಮಹಾಮಸ್ತಾಕಾಭಿಷೇಕ ಜರಗಿತ್ತು. ಇದೀಗ 2027ರಲ್ಲಿ ನಡೆಯುವ ಮಹಾಮಸ್ತಾಕಾಭಿಷೇಕವನ್ನು ಅತ್ಯಂತ ವೈಭವಯುತವಾಗಿ ನಡೆಸಲು ನಿರ್ಧರಿಸಲಾಗಿದೆ.
ಜನವರಿ 26 ರಂದು ನಡೆಯುವ ಸಮಾಲೋಚನಾ ಸಭೆಯು ಜೈನ ಧರ್ಮ ಜೀರ್ಣೋದ್ಧಾರಕ ಸಂಘದ ಅಧ್ಯಕ್ಷ ಸ್ವಾಮಿಯ ಮೂರ್ತಿ ನಿರ್ಮಾಣ, ಪ್ರತಿಷ್ಠಾಪನೆ ಮತ್ತು ಮಹಾಮಸ್ತಾಕಾಭಿಷೇಕದಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯಲಿದೆ.
ಮಹಾಮಸ್ತಕಾಭಿಷೇಕ ಮಹೋತ್ಸವದ ನಿಮಿತ್ತ ವಿವಿಧ ಸಮಿತಿಗಳನ್ನು ರಚಿಸಲಿರುವುದರಿಂದ ಜೈನ ಸಮಾಜದ ಎಲ್ಲಾ ಶ್ರಾವಕ-ಶ್ರಾವಕಿಯರು ಈ ಸಭೆಗೆ ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕೆಂದು ಶ್ರೀ ಜೈನಧರ್ಮ ಜೀರ್ಣೋದ್ಧಾರಕ ಸಂಘ (ರಿ.), ಕಾರ್ಕಳ ಇದರ ಕಾರ್ಯಾಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ತಿಳಿಸಿದ್ದಾರೆ.