ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ವಿಬಿ-ಜಿ ರಾಮ್ ಜಿ’ ಕುರಿತು ಕಾರ್ಯಾಗಾರ
ಕಾರ್ಯಾಗಾರವನ್ನು ಸಂಸದ ಕ್ಯಾ. ಬ್ರಿಜೇಶ್ ಚೌಟ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್‌ಗೆ ಈ ಯೋಜನೆಯನ್ನು ನೋಡಿ ಭ್ರಮನಿರಸನವಾಗಿದೆ. ಅದಕ್ಕೆ ಜನರ ಮಧ್ಯದಲ್ಲಿ ಅನೇಕ ಸುಳ್ಳುಗಳನ್ನು ಪಸರಿಸಲು ಹೊರಟಿದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ವಿಬಿ-ಜಿ ರಾಮ್ ಜಿ’ ಅಂದರೆ ‘ವಿಕಸಿತ ಭಾರತ ಗ್ಯಾರಂಟಿ ರೋಜಗಾರ್ ಆಜೀವಿಕಾ ಮಿಷನ್ ಗ್ರಾಮೀಣ’ ಇದು ಗ್ರಾಮೀಣಾಭಿವೃದ್ಧಿ ಯೋಜನೆಯಾಗಿ ಫಲಪ್ರದವಾಗಿ ಜನರಿಗೆ ತಲುಪಿದ್ದೇ ಆದಲ್ಲಿ ಅನೇಕ ಸುಧಾರಣೆಗಳನ್ನು ಹೊಂದಿರುವ ಈ ಹೊಸ ಯೋಜನೆಯಿಂದಾಗಿ ಜನರ ಪ್ರೀತಿ ಬಿಜೆಪಿಯ ಪರವಾಗಿ ಪರಿವರ್ತನೆ ಆಗುವುದು ಗ್ಯಾರಂಟಿ ಆದರಿಂದ ಅದನ್ನು ಈಗಲೇ ಸುಳ್ಳುಗಳನ್ನು ಪಸರಿಸಿಯಾದರೂ ನಿಲ್ಲಿಸಬೇಕೆಂಬ ವ್ಯರ್ಥ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಅಷ್ಟೇ. ಅವರ ಸುಳ್ಳಿನ ಕೋಟೆಯನ್ನು ಭಾರತೀಯ ಜನತಾ ಪಾರ್ಟಿ ಒಡೆದು ಹಾಕಲಿದೆ ಎಂದು ಎಚ್ಚರಿಸಿದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಡಾ. ಲಕ್ಷ್ಮೀ ಅಶ್ವಿನ್ ಗೌಡ ‘ವಿಬಿ-ಜಿ ರಾಮ್ ಜಿ’ ಕಾರ್ಯಾಗಾರವನ್ನು ಉದ್ದೇಶಿಸಿ ಹಳೆಯ ನರೆಗಾ ಯೋಜನೆ ಹಾಗೂ ಈ ಹೊಸ ಯೋಜನೆಯ ಬಗ್ಗೆ ತುಲನಾತ್ಮಕವಾಗಿ ವಿಶ್ಲೇಷಣೆ ಮಾಡಿದ ಹಳೇ ನರೇಗಾ ಯೋಜನೆ ಹಲವು ಭ್ರಷ್ಟಾಚಾರಗಳಿಗೆ ಒಳಗಾಗಿತ್ತು ಹಾಗೂ ‘ವಿಬಿ ಜಿ ರಾಮ್ ಜಿ’ ಹಲವು ತಂತ್ರಜ್ಞಾನವನ್ನು ಬಳಸಿಕೊಂಡು ಅನೇಕ ಸೋರಿಕೆಗಳನ್ನು ತಡೆದಿದೆ ಹಾಗೂ ನೇರವಾಗಿ ಫಲಾನುಭವಿಗೆ ಯೋಜನೆಯ ಲಾಭ ತಲುಪುವಂತಾಗಿದೆ. ಈ ಹಿಂದೆ 100 ದಿನದ ಬದಲಾಗಿ 125 ದಿನಗಳ ಕೆಲಸ ಹಾಗೂ ಕನಿಷ್ಟ ದಿನಗೂಲಿಯನ್ನು ಅಮೂಲಾಗ್ರವಾಗಿ ಹೆಚ್ಚಿಸಲಾಗಿದೆ. ಹಾಗೂ ಗ್ರಾಮ ಪಂಚಾಯತ್‌ಗೆ ವಿಕಸಿತ ಭಾರತದಲ್ಲಿ ಭಾಗಿದಾರಿಯಾಗುವ ಹೆಚ್ಚಿನ ಅವಕಾಶ ನೀಡುವ ಯೋಜನೆ ಇದಾಗಿದೆ ಎಂದು ತಿಳಿಸಿದರು.
ಕರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕಾಂಗ್ರೆಸ್‌ನವರು ಹಲವು ಯೋಜನೆಗಳ ಹೆಸರು ಬದಲಾಯಿಸಿದ್ದಾರೆ. ವಿಬಿ- ಜಿ ರಾಮ್ ಜಿ ಯೋಜನೆ ಗ್ರಾಮಗಳನ್ನು ಬಲಪಡಿಸುವ ಬಡ ಜನರಿಗೆ ಶಕ್ತಿ ತುಂಬುವ ಯೋಜನೆಯಾಗಿದೆ. ಬಿಜೆಪಿಯು ಜಿಲ್ಲೆಯ ಜನರ ಮಧ್ಯದಲ್ಲಿ ಈ ಯೋಜನೆಯನ್ನು ಪ್ರಚಾರಮಾಡಿ ಅವರಿಗೆ ಇದರ ಲಾಭವನ್ನು ತಲುಪಿಸಲು ದೊಡ್ಡ ರೀತಿಯಲ್ಲಿ ಕೆಲಸ ಮಾಡಲಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಶಾಸಕರಾದ ಉಮಾನಾಥ್ ಕೋಟ್ಯಾನ್, ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್ ಪಿ., ಮಾಜಿ ಶಾಸಕ ಕೆ. ಮೋನಪ್ಪ ಭಂಡಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಪ್ರೇಮಾನಂದ ಶೆಟ್ಟಿ ಜಿಲ್ಲಾ ಪ್ರಮುಖರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮಾಧವ ಮಾವೆ ಕಾರ್ಯಕ್ರಮ ನಿರ್ವಹಿಸಿದರು. ದೇವಪ್ಪ ಪೂಜಾರಿ ವಂದಿಸಿದರು.