ಜ.9 ರಿಂದ 11 ರವರೆಗೆ ಮಂಗಳೂರು ಬೀಚ್ ಫೆಸ್ಟಿವಲ್-ಟ್ರಯಾಥ್ಲಾನ್: ಸಭಿತಾ ಆರ್. ಶೆಟ್ಟಿ
ಅವರು ಇಂದು ನಗರದ ಪತ್ರಿಕಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿ, ಚೈಲ್ಡ್‌ವುಡ್ ಕ್ಯಾನ್ಸರ್ ರೋಗಿಗಳನ್ನು ಆರೈಕೆ ಮಾಡುವ ನಿಟ್ಟಿನಲ್ಲಿ ತಪಸ್ಯ ಫೌಂಡೇಷನ್‌ನನ್ನು ಪ್ರಾರಂಭಿಸಿದ್ದು, 2018ರಲ್ಲಿ ಮೊದಲ ಬಾರಿಗೆ ಅತ್ಲೆಟಿಕ್ ಸ್ಪರ್ಧೆಯನ್ನು ಏರ್ಪಡಿಸಿದ್ದು, ಆ ವರ್ಷ 1.60 ಲಕ್ಷ ಹಣ ಬಂದಿದ್ದು, ಆ ಹಣವನ್ನು ಕೆಎಂಸಿ ಆಸ್ಪತ್ರೆಗೆ ಬಳಸಿದ್ದು, ಆ ಯೋಜನೆಯ ಮೂಲಕ ಕಲೇದ ಮೂರು ವರ್ಷಗಳಿಂದ ಮಂಗಳೂರು ಬೀಚ್ ಫೆಸ್ಟಿವಲ್ ಹಾಗೂ ಟ್ರಯಾಥ್ಲಾನ್ ಏರ್ಪಡಿಸಿ ಇದರಿಂದ ಬರುವ ಒಂದು ರೂ. ಹಣವನ್ನೂ ಸಂಸ್ಥೆಗೆ ಬಳಸಲಾಗುವುದು ಎಂದು ಹೇಳಿದರು.
ತಪಸ್ಯ ಫೌಂಡೇಷನ್ ವತಿಯಿಂದ ಈಗಾಗಲೇ ದ.ಕ. ಜಿಲ್ಲೆ ಮಾತ್ರವಲ್ಲದೇ ಕಾಸರಗೋಡಿನ ತನಕ ಉಚಿತವಾಗಿ ಕ್ಯಾನ್ಸರ್ ರೋಗಿಗಳಿಗೆ ಅಗತ್ಯ ಬಿದ್ದಲ್ಲಿ ಮನೆ ಮನೆಗಳಿಗೆ ಸೇವೆಯನ್ನು ನೀಡಲಾಗುತ್ತಿದೆ. ಆ ಮೂಲಕ ಅವರ ಕೊನೆಯ ದಿನಗಳನ್ನು ಸಂತೋಷದಿಂದ ಇರಿಸುವ ಪ್ರಯತ್ನ ಎಂದರು.
ಬೀಚ್ ಫೆಸ್ಟಿವಲ್ ಸಂಘಟಕರಾದ ನವಿನ್ ಹೆಗ್ಡೆ ಮಾತನಾಡಿ, ನಾವು ಇಲ್ಲಿ ಟ್ರಯಾಥ್ಲಾನ್ ಮೂಲಕ ಬರುವ ಮಕ್ಕಳಲ್ಲಿ ಗೆದ್ದ ನಾಲ್ಕು ಮಕ್ಕಳನ್ನು ಆಯ್ಕೆ ಮಾಡಿಕೊಂಡು ಅವರಿಗೆ ಉತ್ತಮ ತರಬೇತಿಯನ್ನು ನೀಡಿ ಅವರನ್ನು ದ.ಕ. ಜಿಲ್ಲೆಯಿಂದ ಒಲೆಂಪಿಕ್‌ಗೆ ಕಳುಹಿಸಿಕೊಡುವ ಯೋಜನೆಯನ್ನು ಹಾಕಿಕೊಂಡಿದ್ದು, ಆಯ್ಕೆಯಾದ ಮಕ್ಕಳಿಗೆ ಉಚಿತವಾಗಿ ತರಬೇತಿ ನೀಡಲಾಗುವುದು ಎಂದರು.
ಮಂಗಳೂರು ಟ್ರಯಾಥ್ಲಾನ್ ಭಾರತದಲ್ಲಿಯೇ ಅತ್ಯಂತ ಪ್ರಭಾವಶಾಲಿ ಅಂತಾರಾಷ್ಟ್ರೀಯ ಎಂಡ್ಯುರೆನ್ಸ್ ಇವೆಂಟ್ ಆಗಿದ್ದು, 2000ಕ್ಕೂ ಹೆಚ್ಚು ಮಂದಿ ವಿದೇಶಿ ಅಥ್ಲೀಟ್‌ಗಳು ಮಂಗಳೂರಿಗೆ ಬರುವ ನಿರೀಕ್ಷೆಯಲ್ಲಿದೆ ಎಂದ ಅವರು ಜ.9 ರಂದು ಬೀಚ್ ಫೆಸಿವಲ್ ಪ್ರಯುಕ್ತ ಆಲ್ಕಾರ್ಗೋ ಇಮರ್ಜ್ ಸ್ಟಾರ್ಟಪ್ ಕಾಂಕ್ಲೇವ್, ವಿಜ್ಞಾನ ಪ್ರದರ್ಶನ-ಕಲೆ ಪ್ರದರ್ಶನ-ಐಟಿ ಕ್ವಿಜ್ ಮೊದಲಾದ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.
ರಿತೇಶ್ ಮಾತನಾಡಿ, ಜ.10 ಮತ್ತು 11 ರಂದು ಕ್ರೀಡೀತ್ಸವ ನಡೆಯಲಿದ್ದು, ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಕ್ರೀಡೋತ್ಸವ ನಡೆಯಲಿದೆ. ಮಂಗಳೂರು ಬೀಚ್ ಮ್ಯಾರಥಾನ್, ಡುಯಾಥ್ಲಾನ್, 40 ಕಿ.ಮೀ. ಡ್ರೀಮ್ ಸೈಕ್ಲಿಂಗ್, ಒಲಿಂಪಿಕ್ ಡಿಸ್ಟನ್ಸಾಟ್ರಯಾಥ್ಲಾನ್, 1000ಮೀ ಡ್ರೀಮ್ ಸ್ವಿಮ್, 500 ಮೀ. ಫನ್ ಸ್ವಿಮ್‌ಅಕ್ವಾಥ್ಲಾನ್, ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 10 ಕಿ.ಮೀ. ಡ್ರೀಮ್ ರಂನ್, 5 ಕಿ.ಮೀ. ಫನ್ ರನ್ ಸ್ಪರ್ಧೆಗಳು ಪ್ರಮುಖವಾಗಿ ನಡೆಯಲಿದ್ದು, ಜ.೧೧ ರಂದು ಬೆಳಗ್ಗೆ 4 ಗಂಟೆಗೆ ಒಲಿಂಪಿಕ್ ಮಾದರಿಯಲ್ಲಿ 1.5 ಕಿ.ಮೀ. ಸ್ವಿಮ್ಮಿಂಗ್, 40 ಕಿ.ಮೀ. ಸೈಕ್ಲಿಂಗ್ ಹಾಗೂ 10 ಕಿ.ಮೀ. ರನ್ನಿಂಗ್ ಸ್ಪರ್ಧೆ ನಡೆಯಲಿದೆ ಎಂದು ತಿಳಿಸಿದರು.
ಇದರೊಂದಿಗೆ ಎಸ್‌ಎಫ್‌ಐ ನ್ಯಾಷನಲ್ ಓಪನ್ ವಾಟರ್ ಸ್ವಿಮ್ಮಿಂಗ್ ಚಾಂಪಿಯನ್‌ಶಿಪ್, ಅಗ್ರಿ ಟೆಕ್ ಎಕ್ಸ್‌ಪೋ, ರಾಜ್ಯ ಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆ, ಕೆಡ್ಲ್ಯೂಎ ರಾಜ್ಯ ಮಟ್ಟದ ಬೀಚ್ ಕುಸ್ತಿ, ಅಧಿಕೃತ ಉದ್ಘಾಟನಾ ಸಮಾರಂಭ, ಇಮರ್ಜ್ ಬೀಚ್‌ಸೈಡ್ ಸ್ಟಾರ್ಟಪ್ ಕಾಂಕ್ಲೇವ್, ಬೈಕ್ ಸ್ಟಂಟ್ ಶೋ, ನೃತ್ಯಾಂತಾರ 2026-ನೃತ್ಯ ಸ್ಪರ್ಧೆ, ಕಲೆ ಸ್ಪರ್ಧೆ ಮತ್ತು ಬಹುಮಾನ ವಿತರಣೆ, ಬ್ಯಾಟಲ್ ಆಫ್ ಬ್ಯಾಂಡ್ಸ್, ಫ್ಯಾಷನ್ ಶೋ, ಸ್ವರದಿ ಲೈನ್ ಕಾರ್ಯಕ್ರಮ, ಥ್ರೋಬಾಲ್‌ಗಳು ನಡೆಯಲಿವೆ ಎಂದರು.
ಬೀಚ್ ರೆಸ್ಲಿಂಗ್ ಕಮಿಟಿಯ ವೈಸ್ ಛೇರ್ಮನ್ ನಿತ್ಯಾನಂದ ಶೆಟ್ಟಿ ಮಾತನಾಡಿ, ಜ.೯ ರಂದು ಸಂಜೆ ೪ ಗಂಟೆಗೆ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ, ದ.ಭಾ. ಕುಸ್ತಿ ಸಂಘದ ಅಧ್ಯಕ್ಷ, ಅ.ಭಾ.ಬೀ.ರೆ.ಕ.ಯ ಅಧ್ಯಕ್ಷ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಅವರು ತಪಸ್ಯ ಫೌಂಡೇಷನ್ ವ್ಯವಸ್ಥಾಪಕ ಟ್ರಸ್ಟಿ ಸಭಿತಾ ಆರ್. ಶೆಟ್ಟಿ, ಬೀಚ್ ರೆಸ್ಲಿಂಗ್ ಕಮಿಟಿಯ ವೈಸ್ ಛೇರ್ಮನ್ ನಿತ್ಯಾನಂದ ಶೆಟ್ಟಿ ಅವರು ಉದ್ಘಾಟಿಸಿ ರಾಜ್ಯ ಮಟ್ಟದ ಬೀಚ್ ರೆಸ್ಲಿಂಗ್ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಲಿದ್ದಾರೆ ಎಂದ ಅವರು ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ನೇರವಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ ಎಂದು ಹೇಳಿದರು.
ಮೊಹಮ್ಮದ್, ಅರವಿಂದ್, ಕರುಣಾಕರ್ ಮತ್ತಿತರರು ಉಪಸ್ಥಿತರಿದ್ದರು.