ವಿನಯ್ ಹೆಗ್ಡೆ ನಿಧನಕ್ಕೆ ಕೆ.ಸಿ. ನಾಕ್ ಸಂತಾಪ

ವಿನಯ್ ಹೆಗ್ಡೆ ನಿಧನಕ್ಕೆ ಕೆ.ಸಿ. ನಾಕ್ ಸಂತಾಪ

ಮಂಗಳೂರು: ನನ್ನ ಆತ್ಮೀಯ ಮಿತ್ರರಾದ ಎನ್. ವಿನಯ ಹೆಗ್ಡೆ ಅವರು ಲ್ಯಾಮಿನಾ ಸಸ್ಪೆನ್ಷನ್ ಪ್ರಾಡಕ್ಟ್ಸ್ ಲಿಮಿಟೆಡ್ ಉದ್ಯಮವನ್ನು ಪ್ರಾರಂಭಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ನೀಡಿ ಅವರ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದರು. 

1979ರಲ್ಲಿ ನಿಟ್ಟೆ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ 46 ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಜಗತ್ತಿನಲ್ಲಿ ಗುರುತಿಸುವ ಮಟ್ಟಕ್ಕೆ ಶಿಕ್ಷಣ ಕ್ಷೇತ್ರದಲ್ಲಿ ಬೆಳೆಸಿರುತ್ತಾರೆ. ಇವರು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾಗಿ, ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್, ಫಾರ್ಮಸಿ, ನರ್ಸಿಂಗ್ ಹಾಗೂ ಹೋಟೆಲ್ ಮ್ಯಾನೆಜ್ಮೆಂಟ್‌ನಂತಹ ವೃತ್ತಿಪರ ಕಾಲೇಜುಗಳನ್ನು ಉಡುಪಿ ಜಿಲ್ಲೆಯ ನಿಟ್ಟೆ, ದಕ್ಷಿಣ ಕನ್ನಡ ಜಿಲ್ಲೆಯ ದೇರಳಕಟ್ಟೆ ಹಾಗೂ ಬೆಂಗಳೂರಿನಲ್ಲಿ ಪರಿಶ್ರಮಪಟ್ಟು ಕಟ್ಟಿ ಬೆಳೆಸಿರುತ್ತಾರೆ.

ಇವರು ಉದ್ದಿಮೆ ಹಾಗೂ ಶಿಕ್ಷಣ ಸಂಸ್ಥೆ ಕಟ್ಟುವ ಸಂದರ್ಭದಲ್ಲಿ ನನ್ನ ಜೊತೆ ನಿರಂತರ ಸಂಪರ್ಕದಲ್ಲಿದ್ದವರು. ಇವರು ಪಟ್ಟ ಕಷ್ಟವನ್ನು ನನ್ನಲ್ಲಿ ಹಂಚಿಕೊಳ್ಳುತ್ತಿದ್ದರು. ಆದರೆ ಇವತ್ತು ಅವರು ಕಟ್ಟಿರುವ ಸಂಸ್ಥೆ ಜಗತ್ತಿನಲ್ಲಿ ಗುರುತಿಸಬಲ್ಲಂತಹ ಸಂಸ್ಥೆಯಾಗಿದೆ.

ಅವರು ಮಗುವಿನಂತಹ ಸ್ವಭಾವವನ್ನು ಹೊಂದಿರುವ ವ್ಯಕ್ತಿಯಾಗಿದ್ದರು. ನನ್ನ ಉದ್ಯಮ ಕ್ಷೇತ್ರ, ಧಾರ್ಮಿಕ ಕ್ಷೇತ್ರ ಹಾಗೂ ನಾನು ಪ್ರಾರಂಭಿಸಿರುವ ಶಕ್ತಿ ಶಿಕ್ಷಣ ಸಂಸ್ಥೆಗೆ ಸದಾ ಮಾರ್ಗದರ್ಶನವನ್ನು ನೀಡುತ್ತಾ ಬಂದಿರುವ ಹೃದಯವಂತ ವ್ಯಕ್ತಿಯಾಗಿದ್ದರು. ನಾನು ಕಷ್ಟದಲ್ಲಿದ್ದಾಗಲೂ ನನಗೆ ಪ್ರೋತ್ಸಾಹವನ್ನು ನೀಡಿ ಮಾರ್ಗದರ್ಶನ ಮಾಡಿರುವ ನನ್ನ ಆತ್ಮೀಯ ಮಿತ್ರ ಎನ್. ವಿನಯ ಹೆಗ್ಡೆ ಅವರ ಅಗಲುವಿಕೆ ನನಗೆ ದುಃಖವನ್ನು ತಂದುಕೊಟ್ಟಿದೆ. ಅವರ ಅಗಲುವಿಕೆ ಸಮಾಜಕ್ಕೆ ಆದ ನಷ್ಟವೆಂದು ನಾನು ಭಾವಿಸುತ್ತೇನೆ. ಅವರ ದಿವ್ಯಾತ್ಮಕ್ಕೆ ಶಕ್ತಿ ನಗರದ ಶ್ರೀ ಗೋಪಾಲ ಕೃಷ್ಣ ದೇವರು ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಶಕ್ತಿ ಎಜ್ಯುಕೇಶನ್ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ. ಕೆ.ಸಿ. ನಾಕ್ ಸಂತಾಪ ಸೂಚಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article