ಮೂರು ದಿನಗಳ ಕರಾವಳಿ ಚಲನ ಚಿತ್ರೋತ್ಸವಕ್ಕೆ ಚಾಲನೆ
ಸ್ಟುಡಿಯೋ ನಿರ್ಮಾಣದ ಅಗತ್ಯವಿದೆ: ರಾಜ್ ಬಿ ಶೆಟ್ಟಿ
ಬಳಿಕ ಮಾತನಾಡಿದ ಅವರು, ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕಾಣುತ್ತಿದೆ. ಇದಕ್ಕೆ ಇಲ್ಲಿನ ಚಲನಚಿತ್ರ ಕ್ಷೇತ್ರದ ಕೊಡುಗೆಯೂ ಇದೆ. ಆದ್ದರಿಂದ ಕರಾವಳಿಯಲ್ಲಿ ಸಿನಿಮಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ದೊಡ್ಡ ಮಟ್ಟದ ಸ್ಟುಡಿಯೊವೊಂದರ ನಿರ್ಮಾಣದ ಯೋಜನೆಗೆ ಸರ್ಕಾರ ಮುಂದಾಗಬೇಕಿದೆ ಎಂದರು.
ನಮ್ಮ ಕರಾವಳಿಯು ಹುಲಿವೇಷ, ಯಕ್ಷಗಾನ, ಸಿನಿಮಾ ಹೀಗೆ ಹಲವು ಕಲಾ ಪ್ರಕಾರಗಳನ್ನು ಒಳಗೊಂಡಿದೆ. ಸಿನಿಮಾ ನೋಡುವ ಅಭಿರುಚಿ ಇರುವಲ್ಲಿ ಒಳ್ಳೆಯ ಕಥೆಗಳು, ಉತ್ತಮ ಸಿನಿಮಾಗಳು ಹುಟ್ಟುವ ಸಾಧ್ಯತೆಗಳು ಹೆಚ್ಚು ಎಂದವರು ಹೇಳಿದರು.
ಚಿತ್ರ ನಿರ್ಮಾಪಕ ರಿಚರ್ಡ್ ಕ್ಯಾಸ್ತಲಿನೊ ಮಾತನಾಡಿ, ‘ಪ್ರತಿವರ್ಷ ಪ್ರಾದೇಶಿಕ ಭಾಷೆಯ ಚಲನ ಚಿತ್ರೋತ್ಸವ ನಡೆಯಬೇಕು. ಸಾರ್ವಜನಿಕರಿಗೆ ಇದರಿಂದ ವಿವಿಧ ಭಾಷೆಗಳ ಚಿತ್ರಗಳನ್ನು ಒಂದೇ ಸೂರಿನಡಿ ನೋಡುವ ಅವಕಾಶ ಸಿಗಲಿದೆ ಎಂದರು.
ಜಿಲ್ಲಾ ಯೋಜನಾ ನಿರ್ದೇಶಕ ಡಾ.ಸಂತೋಷ್ ಕುಮಾರ್, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್.ಧನರಾಜ್, ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್‌ಬೈಲ್, ಮಂಗಳೂರು ಸ್ಮಾರ್ಟ್ ಸಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್, ಪ್ರಮುಖರಾದ ಯತೀಶ್ ಬೈಕಂಪಾಡಿ, ರವಿ ಕಳಸ, ಬಾಲಕೃಷ್ಣ ಶೆಟ್ಟಿ, ಶ್ರೀನಿವಾಸ, ಪ್ರಕಾಶ್ ಪಾಂಡೇಶ್ವರ, ಸಚಿನ್ ಉಪ್ಪಿನಂಗಡಿ, ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು.
ಜ.20ರಂದು ಬೆಳಗ್ಗೆ 10.30ಕ್ಕೆ ಪಿದಯಿ ತುಳು ಚಲನಚಿತ್ರ, 1.30ಕ್ಕೆ ಪಿಲಿಬೈಲ್ ಯಮುನಕ್ಕ ತುಳು, ಸಂಜೆ 4.30ಕ್ಕೆ ಮೀರಾ ತುಳು, ರಾತ್ರಿ 7ಕ್ಕೆ ಗಿರ್‌ಗಿಟ್ ತುಳು, 7.30ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕನ್ನಡ, ರಾತ್ರಿ 10ಕ್ಕೆ ಕೊರಮ್ಮ ತುಳು ಚಲನಚಿತ್ರ ಪ್ರದರ್ಶಿಸಲ್ಪಡಲಿವೆ.